ಪ್ರಲಾಪಗಳು 4:4

ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ.

ಸಂದರ್ಭದೊಂದಿಗೆ ಓದಿ · ಪ್ರಲಾಪಗಳು 4

2ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಕುಮಾರರು ಹೇಗೆ ಮಣ್ಣಿನ ಪಾತ್ರೆಗಳಂತೆಯೂ ಕುಂಬಾರನ ಕೈಕೆಲಸದ ಹಾಗೆಯೂ ಎಣಿಸಲ್ಪಟ್ಟಿ ದ್ದಾರಲ್ಲಾ!

3ಸಮುದ್ರದ ವಿಕಾರವಾದ ಪ್ರಾಣಿಗಳಾ ದರೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಮೊಲೆ ಕೊಡುತ್ತವೆ; ಆದರೆ ನನ್ನ ಜನರ ಮಗಳು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿ ದ್ದಾಳೆ.

4ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ.

5ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.

6ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ.

ಪ್ರಲಾಪಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी