ದೇಶದ ಜನರು ಸಬ್ಬತ್ತುಗಳಲ್ಲಿಯೂ, ಅಮಾವಾಸ್ಯೆ ಗಳಲ್ಲಿಯೂ ಈ ಬಾಗಲಿನ ಕದದ ಹತ್ತಿರ ಕರ್ತನ ಮುಂದೆ ಇದೇ ರೀತಿ ಆರಾಧಿಸಬೇಕು.
1ದೇವರಾದಕರ್ತನು ಹೀಗೆ ಹೇಳುತ್ತಾನೆ--ಒಳಗಿನ ಅಂಗಳದ ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲು ಕೆಲಸ ನಡೆಯುವ ಆರು ದಿವಸಗಳಲ್ಲಿ ಮುಚ್ಚಲ್ಪಡಬೇಕು; ಆದರೆ ಸಬ್ಬತ್ ದಿವಸದಲ್ಲಿ ಅದು ತೆರೆಯಲ್ಪಡಬೇಕು, ಅಮಾವಾಸ್ಯೆಯ ದಿನದಲ್ಲೂ ಅದು ತೆರೆಯಲ್ಪಡಬೇಕು.
2ಪ್ರಭುವು ಆ ಬಾಗಲಿನ ದ್ವಾರಾಂಗಣ ಮಾರ್ಗವಾಗಿ ಹೊರಗಿ ನಿಂದ ಪ್ರವೇಶಿಸಿ ಬಾಗಲಿನ ಕಂಬದ ಬಳಿಯಲ್ಲಿ ನಿಲ್ಲಬೇಕು, ಆಗ ಯಾಜಕರು ಅವನ ದಹನಬಲಿಯನ್ನು ಸಮಾಧಾನದ ಬಲಿಗಳನ್ನು ಸಿದ್ಧಮಾಡಬೇಕು; ಬಾಗ ಲಿನ ಹೊಸ್ತಿಲಲ್ಲಿ ಆರಾಧಿಸಿ ಹೋಗಬೇಕು. ಆದರೆ ಬಾಗಲು ಸಂಜೆಯವರೆಗೂ ಮುಚ್ಚಲ್ಪಡಬಾರದು;
3ದೇಶದ ಜನರು ಸಬ್ಬತ್ತುಗಳಲ್ಲಿಯೂ, ಅಮಾವಾಸ್ಯೆ ಗಳಲ್ಲಿಯೂ ಈ ಬಾಗಲಿನ ಕದದ ಹತ್ತಿರ ಕರ್ತನ ಮುಂದೆ ಇದೇ ರೀತಿ ಆರಾಧಿಸಬೇಕು.
4ಪ್ರಧಾನರು ಕರ್ತನಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.
5ಹೇಗಂದರೆ ಆಹಾರದ ಅರ್ಪಣೆಯಾಗಿ ಟಗರಿಗೆ ಒಂದು ಎಫ, ಕುರಿಮರಿಗೆ ತಕ್ಕ ಅವನ ಕೈಲಾದಂತ ಆಹಾರ ಅರ್ಪ ಣೆಯು ಒಂದಕ್ಕೆ ಎಣ್ಣೆಯ ಒಂದು ಹಿನ್ನನ್ನು ಅರ್ಪಿಸ ಬೇಕು;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ