ದಾನಿಯೇಲನು 7:10

ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟು ಬಂದಿತು; ಸಹಸ್ರ ಸಹಸ್ರ ವಾಗಿ ಆತನಿಗೆ ಸೇವೆಮಾಡಿದರು. ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ಕೂತು ಕೊಂಡರು. ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 7

8ಆ ಕೊಂಬುಗಳ ಬಗ್ಗೆ ನಾನು ಆಲೋಚಿಸು ತ್ತಿರುವಾಗ ಇಗೋ, ಮತ್ತೊಂದು ಚಿಕ್ಕ ಕೊಂಬು ಅವುಗಳಲ್ಲಿ ಎದ್ದು ಕಾಣುತ್ತಿತ್ತು. ಇದರ ಮುಂದೆ ಮೊದ ಲಿನ ಕೊಂಬುಗಳಲ್ಲಿ ಮೂರು ಬೇರುಸಹಿತ ಕೀಳಲ್ಪ ಟ್ಟಿವೆ ಮತ್ತು ಇಗೋ, ಈ ಕೊಂಬಿನಲ್ಲಿ ಮನುಷ್ಯರ ಕಣ್ಣುಗಳ ಹಾಗೆ ಕಣ್ಣುಗಳೂ ಬಡಾಯಿಕೊಚ್ಚುವ ಬಾಯಿಯೂ ಇದ್ದವು.

9ನಾನು ನೋಡುತ್ತಿದ್ದ ಹಾಗೆಯೇ ಸಿಂಹಾಸನಗಳು ಹಾಕಲ್ಪಟ್ಟು ಅದರ ಮೇಲೆ ಪೂರ್ವಿಕನೊಬ್ಬನು ಕುಳಿತುಕೊಂಡನು. ಆತನ ವಸ್ತ್ರವು ಹಿಮದಂತೆ ಬಿಳುಪಾಗಿಯೂ ಆತನ ತಲೆಕೂದಲು ಶುದ್ಧ ಉಣ್ಣೆಯಂತೆಯೂ ಆತನ ಸಿಂಹಾಸನವು ಅಗ್ನಿಜ್ವಾಲೆಯಂತೆಯೂ ಆತನ ಚಕ್ರಗಳು ಉರಿಯುವ ಬೆಂಕಿಯಂತೆಯೂ ಇದ್ದವು.

10ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟು ಬಂದಿತು; ಸಹಸ್ರ ಸಹಸ್ರ ವಾಗಿ ಆತನಿಗೆ ಸೇವೆಮಾಡಿದರು. ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ಕೂತು ಕೊಂಡರು. ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.

11ಆ ಕೊಂಬು ಮಾತನಾಡಿದ ದೊಡ್ಡ ಮಾತುಗಳ ಶಬ್ದದ ವಿಷಯ ನಾನು ನೋಡುತ್ತಿರುವಾಗಲೇ ಮೃಗವು ಕೊಲ್ಲ ಲ್ಪಟ್ಟು ಅದರ ಶರೀರವನ್ನು ನಾಶಪಡಿಸಿ; ಅದು ಬೆಂಕಿಯ ಉರಿಗೆ ಹಾಕಲ್ಪಟ್ಟಿತು.

12ಮಿಕ್ಕ ಮೃಗಗಳ ವಿಷಯ ವಾದರೊ! ಅವುಗಳ ಅಧಿಕಾರವು ತೆಗೆದುಹಾಕಲ್ಪಟ್ಟಿತು. ಆದರೆ ಕೆಲವು ಕಾಲದ ಮೇಲೆ ತಕ್ಕ ಸಮಯ ಬರುವ ವರೆಗೂ ಅವುಗಳ ಜೀವವನ್ನು ಉಳಿಸಿದರು.

ದಾನಿಯೇಲನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी