ರೋಮಾಪುರದವರಿಗೆ 7:3

ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಮದುವೆ ಮಾಡಿಕೊಂಡರೆ ವ್ಯಭಿ ಚಾರಿಣಿ ಎಂದು ಕರೆಯಲ್ಪಡುವಳು; ಗಂಡನು ಸತ್ತರೆ ಆ ನ್ಯಾಯಪ್ರಮಾಣದಿಂದ ಆಕೆಯು ಬಿಡುಗಡೆಯಾಗಿ ದ್ದಾಳೆ. ಹೀಗೆ ಆಕೆ ಮತ್ತೊಬ್ಬನನ್ನು ಮದುವೆ ಮಾಡಿ ಕೊಂಡರೂ ವ್ಯಭಿಚಾರಿಣಿಯಲ್ಲ.

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 7

1ಸಹೋದರರೇ, (ನ್ಯಾಯಪ್ರಮಾಣವನ್ನು ತಿಳಿದವರಿಗೆ ನಾನು ಹೇಳುವದೇ ನಂದರೆ,) ಒಬ್ಬ ಮನುಷ್ಯನು ಜೀವದಿಂದಿರುವ ತನಕ ಅವನ ಮೇಲೆ ನ್ಯಾಯಪ್ರಮಾಣವು ಪ್ರಭುತ್ವ ಮಾಡುತ್ತ ದೆಂಬದು ನಿಮಗೆ ಗೊತ್ತಿಲ್ಲವೇ?

2ಗಂಡನಿರುವ ಸ್ತ್ರೀಯು ಅವನು ಬದುಕಿರುವ ತನಕ ನ್ಯಾಯಪ್ರಮಾಣದಿಂದ ಅವನಿಗೆ ಕಟ್ಟಲ್ಪಟ್ಟಿದ್ದಾಳೆ; ಗಂಡನು ಸತ್ತರೆ ಆಕೆಯು ಅವನ ನ್ಯಾಯಪ್ರಮಾಣದಿಂದ ಬಿಡುಗಡೆಯಾಗಿ ದ್ದಾಳೆ.

3ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಮದುವೆ ಮಾಡಿಕೊಂಡರೆ ವ್ಯಭಿ ಚಾರಿಣಿ ಎಂದು ಕರೆಯಲ್ಪಡುವಳು; ಗಂಡನು ಸತ್ತರೆ ಆ ನ್ಯಾಯಪ್ರಮಾಣದಿಂದ ಆಕೆಯು ಬಿಡುಗಡೆಯಾಗಿ ದ್ದಾಳೆ. ಹೀಗೆ ಆಕೆ ಮತ್ತೊಬ್ಬನನ್ನು ಮದುವೆ ಮಾಡಿ ಕೊಂಡರೂ ವ್ಯಭಿಚಾರಿಣಿಯಲ್ಲ.

4ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ನ್ಯಾಯಪ್ರಮಾಣದ ಪಾಲಿಗೆ ಸತ್ತಿರಿ. ದೇವರಿಗೆ ಫಲಫಲಿಸುವದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತುಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿರಿ.

5ನಾವು ಶರೀರದಲ್ಲಿದ್ದಾಗ ಪಾಪಗಳ ಇಚ್ಛೆಗಳು ನ್ಯಾಯಪ್ರಮಾಣದಿಂದಲೇ ಮರಣಕ್ಕೆ ಫಲಫಲಿಸುವ ದಕ್ಕಾಗಿ ನಮ್ಮ ಅಂಗಗಳಲ್ಲಿ ಯತ್ನಿಸುತ್ತಿದ್ದವು.

ರೋಮಾಪುರದವರಿಗೆ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी