ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ.
5ಅನ್ಯಜನಾಂಗಗಳಲ್ಲಿ ನೋಡಿ ಲಕ್ಷ್ಯಗೊಟ್ಟು ಬಹಳ ವಾಗಿ ಆಶ್ಚರ್ಯಪಡಿರಿ; ತಿಳಿಸಿದರೂ ನೀವು ನಂಬದಂಥ ಕ್ರಿಯೆಯನ್ನು ನಿಮ್ಮ ದಿವಸಗಳಲ್ಲಿ ನಾನು ಮಾಡುತ್ತೇನೆ.
6ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು.
7ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ.
8ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು.
9ಅವರೆಲ್ಲರು ಹಿಂಸಿಸುವದಕ್ಕೆ ಬರುವರು; ಅವರ ಮುಖಗಳು ಮೂಡಣ ಗಾಳಿ ಯಂತೆಯೇ ತಿಂದುಬಿಡುವವು; ಸೆರೆಯವರನ್ನು ಮರ ಳಿನ ಹಾಗೆ ಕೂಡಿಸುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ