ಇವನು ಅವನ ಬಳಿಗೆ ಬಂದಾಗ ಇಗೋ, ಅವನೂ ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು;
15ಆಗ ಅವನು ಬಾಲಾಕನಿಗೆ--ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ; ನಾನು ಅಲ್ಲಿ ಕರ್ತನನ್ನು ಆಚೆಯಲ್ಲಿ ಎದುರುಗೊಳ್ಳುವೆನು ಅಂದನು.
16ಕರ್ತನು ಬಿಳಾಮನ ಎದುರಿಗೆ ಬಂದು ಅವನ ಬಾಯೊಳಗೆ ವಾಕ್ಯವನ್ನಿಟ್ಟು--ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಈ ಪ್ರಕಾರ ಮಾತನಾಡು ಅಂದನು.
17ಇವನು ಅವನ ಬಳಿಗೆ ಬಂದಾಗ ಇಗೋ, ಅವನೂ ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು;
18ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.
19ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ