ನ್ಯಾಯಸ್ಥಾಪಕರು 13:16

ಕರ್ತನ ದೂತನು ಮಾನೋಹನಿಗೆ--ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ರೊಟ್ಟಿಯನ್ನು ತಿನ್ನುವ ದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ ಅದನ್ನು ಕರ್ತನಿಗೆ ಅರ್ಪಿಸಬೇಕು ಅಂದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 13

14ದ್ರಾಕ್ಷೇ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ ಅಶು ಚಿಯಾದ ಒಂದನ್ನೂ ತಿನ್ನದೆ ಇದ್ದು ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಕೊಳ್ಳಲಿ ಅಂದನು.

15ಮಾನೋ ಹನು ಕರ್ತನ ದೂತನಿಗೆ--ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವ ವರೆಗೆ ನಿನ್ನನ್ನು ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ ಅಂದನು.

16ಕರ್ತನ ದೂತನು ಮಾನೋಹನಿಗೆ--ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ರೊಟ್ಟಿಯನ್ನು ತಿನ್ನುವ ದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ ಅದನ್ನು ಕರ್ತನಿಗೆ ಅರ್ಪಿಸಬೇಕು ಅಂದನು.

17ಅವನು ಕರ್ತನ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಕರ್ತನ ದೂತನಿಗೆ--ನೀನು ಹೇಳಿದ ಮಾತುಗಳು ನೆರವೇರುವಾಗ ನಾವು ನಿನ್ನನ್ನು ಘನ ಪಡಿಸುವ ಹಾಗೆ ನಿನ್ನ ಹೆಸರೇನು ಅಂದನು.

18ಆದರೆ ಕರ್ತನ ದೂತನು ಅವನಿಗೆ--ನನ್ನ ಹೆಸರು ಏನೆಂದು ನೀನು ಕೇಳುವದೇನು? ಆ ಹೆಸರು ರಹಸ್ಯವಾದದ್ದು ಅಂದನು.

ನ್ಯಾಯಸ್ಥಾಪಕರು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी