ಯೆಶಾಯ 61:4

ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ ಮುಂಚೆ ಕೆಡವಲ್ಪಟ್ಟವುಗಳನ್ನು ಎಬ್ಬಿಸುವರು; ಹಾಳಾದ ಪಟ್ಟಣಗಳನ್ನೂ ಅನೇಕ ಸಂತತಿಗಳಿಂದ ಕೆಡವಲ್ಪಟ್ಟವುಗಳನ್ನೂ ಜೀರ್ಣೋದ್ಧಾರ ಮಾಡುವರು.

ಸಂದರ್ಭದೊಂದಿಗೆ ಓದಿ · ಯೆಶಾಯ 61

2ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ

3ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.

4ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ ಮುಂಚೆ ಕೆಡವಲ್ಪಟ್ಟವುಗಳನ್ನು ಎಬ್ಬಿಸುವರು; ಹಾಳಾದ ಪಟ್ಟಣಗಳನ್ನೂ ಅನೇಕ ಸಂತತಿಗಳಿಂದ ಕೆಡವಲ್ಪಟ್ಟವುಗಳನ್ನೂ ಜೀರ್ಣೋದ್ಧಾರ ಮಾಡುವರು.

5ಇದಲ್ಲದೆ ಅನ್ಯರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು; ಪರರ ಪುತ್ರರು ನಿಮಗೆ ನೇಗಿಲು ಹೂಡುವವರೂ ದ್ರಾಕ್ಷೇತೋಟ ಕಾಯುವವರೂ ಆಗಿರುವರು.

6ಆದರೆ ನಿಮಗೆ ಕರ್ತನ ಯಾಜಕರೆಂದು ಹೆಸರಿಡುವರು ನೀವು ನಮ್ಮ ದೇವರ ಸೇವಕರೆಂದು ಜನರು ಕರೆಯುವರು. ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ; ಅವರ ಮಹಿಮೆಯಲ್ಲಿ ನೀವು ಹೆಚ್ಚಳಪಡುವಿರಿ.

ಯೆಶಾಯ 61 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी