ಆದಿಕಾಂಡ 26:28

ಅದಕ್ಕೆ ಅವರು--ನಿಶ್ಚಯವಾಗಿ ಕರ್ತನು ನಿನ್ನ ಸಂಗಡ ಇದ್ದಾನೆಂದು ತಿಳಿದು ನಮಗೂ ನಿನಗೂ ಮಧ್ಯದಲ್ಲಿ ಒಂದು ಪ್ರಮಾಣ ವಿರುವ ಹಾಗೆ ನಿನ್ನ ಸಂಗಡ ಒಡಂಬಡಿಕೆ ಮಾಡಿ ಕೊಳ್ಳೋಣವೆಂದು ನಾವು ಅಂದುಕೊಂಡೆವು;

ಸಂದರ್ಭದೊಂದಿಗೆ ಓದಿ · ಆದಿಕಾಂಡ 26

26ತರುವಾಯ ಅಬೀಮೆಲೆಕನೂ ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ ಅವನ ಮುಖ್ಯ ಸೈನ್ಯಾಧಿಪತಿ ಯಾದ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು.

27ಇಸಾಕನು ಅವರಿಗೆ--ನನ್ನ ಬಳಿಗೆ ನೀವು ಯಾಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿ ಬಿಟ್ಟಿರಲ್ಲಾ ಅಂದನು.

28ಅದಕ್ಕೆ ಅವರು--ನಿಶ್ಚಯವಾಗಿ ಕರ್ತನು ನಿನ್ನ ಸಂಗಡ ಇದ್ದಾನೆಂದು ತಿಳಿದು ನಮಗೂ ನಿನಗೂ ಮಧ್ಯದಲ್ಲಿ ಒಂದು ಪ್ರಮಾಣ ವಿರುವ ಹಾಗೆ ನಿನ್ನ ಸಂಗಡ ಒಡಂಬಡಿಕೆ ಮಾಡಿ ಕೊಳ್ಳೋಣವೆಂದು ನಾವು ಅಂದುಕೊಂಡೆವು;

29ಅದೇನಂದರೆ--ನಾವು ನಿನ್ನನ್ನು ಮುಟ್ಟದೆ ನಿನಗೆ ಒಳ್ಳೇದನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು; ನೀನು ಈಗ ಕರ್ತನಿಂದ ಆಶೀರ್ವದಿ ಸಲ್ಪಟ್ಟವನಾಗಿದ್ದೀ ಅಂದರು.

30ಆಗ ಅವನು ಅವರಿಗೆ ಔತಣವನ್ನು ಮಾಡಿಸಿದನು. ಅವರು ತಿಂದು ಕುಡಿದರು;

ಆದಿಕಾಂಡ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी