ವಿಮೋಚನಕಾಂಡ 34:26

ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿಮ್ಮ ದೇವರಾದ ಕರ್ತನ ಮನೆಗೆ ತರ ಬೇಕು. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 34

24ನಾನು ಜನಾಂಗಗಳನ್ನು ನಿಮ್ಮ ಎದುರಿನಿಂದ ಹೊರ ಡಿಸಿಬಿಟ್ಟು ನಿಮ್ಮ ಮೇರೆಗಳನ್ನು ವಿಸ್ತಾರಮಾಡುವೆನು. ವರುಷಕ್ಕೆ ಮೂರು ಸಾರಿ ನೀವು ನಿಮ್ಮ ದೇವರಾದ ಕರ್ತನ ಸನ್ನಿಧಿಗೆ ಹೋಗುವ ಸಮಯದಲ್ಲಿ ಯಾರೂ ನಿಮ್ಮ ದೇಶವನ್ನು ಆಶಿಸರು.

25ನನ್ನ ಬಲಿಯ ರಕ್ತವನ್ನು ಹುಳಿಹಿಟ್ಟಿನ ಸಂಗಡ ಅರ್ಪಿಸಬಾರದು. ಇಲ್ಲವೆ ಪಸ್ಕ ಹಬ್ಬದ ಬಲಿಯನ್ನು ಬೆಳಗಿನ ವರೆಗೂ ಉಳಿಸಬಾರದು.

26ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿಮ್ಮ ದೇವರಾದ ಕರ್ತನ ಮನೆಗೆ ತರ ಬೇಕು. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂದು ಹೇಳಿದನು.

27ಕರ್ತನು ಮೋಶೆಗೆ--ನೀನು ಈ ವಾಕ್ಯಗಳನ್ನು ಬರೆ; ಈ ವಾಕ್ಯಗಳ ಪ್ರಕಾರವೇ ನಿನ್ನ ಸಂಗಡಲೂ ಇಸ್ರಾಯೇಲಿನ ಸಂಗಡಲೂ ನಾನು ಒಡಂಬಡಿಕೆಯನ್ನು ಮಾಡಿದ್ದೇನೆ ಅಂದನು.

28ಮೋಶೆಯು ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಅಲ್ಲಿ ಕರ್ತನ ಸಂಗಡ ಇದ್ದನು. ಆತನು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದನು.

ವಿಮೋಚನಕಾಂಡ 34 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी