ಅರಸನು--ನೀನು ಇತ್ತ ಬಂದು ನಿಲ್ಲು ಅಂದನು. ಅವನು ಅತ್ತ ಹೋಗಿ ನಿಂತನು; ಆಗ ಇಗೋ, ಕೂಷ್ಯನು ಬಂದನು.
28ಆಗ ಅಹೀಮಾಚನು ಕೂಗಿ ಅರಸನಿಗೆಎಲ್ಲವೂ ಕ್ಷೇಮ ಎಂದು ಹೇಳಿ ಅರಸನ ಮುಂದೆಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಜನರನ್ನು ಒಪ್ಪಿಸಿಕೊಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು.
29ಅರಸನು-- ಯೌವನಸ್ಥನಾದ ಅಬ್ಷಾಲೋಮನು ಕ್ಷೇಮವೋಎಂದು ಕೇಳಿದನು. ಅದಕ್ಕೆ ಅಹೀಮಾಚನು ಪ್ರತ್ಯುತ್ತರ ವಾಗಿ--ಯೋವಾಬನು ಅರಸನ ಸೇವಕನನ್ನು ನಿನ್ನ ಸೇವಕನಾದ ನನ್ನನ್ನು ಕಳುಹಿಸಿದಾಗ ದೊಡ್ಡ ಸಮೂಹ ವನ್ನು ಕಂಡೆನು. ಆದರೆ ಅದು ಏನೋ ನಾನರಿಯೆ ಅಂದನು.
30ಅರಸನು--ನೀನು ಇತ್ತ ಬಂದು ನಿಲ್ಲು ಅಂದನು. ಅವನು ಅತ್ತ ಹೋಗಿ ನಿಂತನು; ಆಗ ಇಗೋ, ಕೂಷ್ಯನು ಬಂದನು.
31ಕೂಷ್ಯನು--ಅರಸ ನಾದ ನನ್ನ ಯಜಮಾನನಿಗೆ ವರ್ತಮಾನ ಉಂಟು. ಏನಂದರೆ, ಕರ್ತನು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು ಎಲ್ಲರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾನೆ ಅಂದನು.
32ಅರಸನು ಕೂಷ್ಯನಿಗೆ ಯೌವನಸ್ಥನಾದ ಅಬ್ಷಾಲೋಮನಿಗೆ ಕ್ಷೇಮವೋ ಅಂದನು. ಕೂಷ್ಯನು ಪ್ರತ್ಯುತ್ತರವಾಗಿ--ಅರಸನಾದ ನನ್ನ ಒಡೆಯನ ಶತ್ರು ಗಳು ಕೇಡುಮಾಡುವಂತೆ ನಿನಗೆ ವಿರೋಧವಾಗಿ ಹೇಳುವ ಎಲ್ಲರೂ ಆ ಯೌವನಸ್ಥನ ಹಾಗೆಯೇ ಇರಲಿ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ