ಇದಲ್ಲದೆ ಅವನು ಲೆಬ ನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಆಗಿತ್ತು; ನಾಲ್ಕು ಸಾಲು ದೇವದಾರು ಕಂಭಗಳ ಮೇಲೆ ಇತ್ತು; ದೇವದಾರು ತೊಲೆಗಳು ಕಂಭಗಳ ಮೇಲೆ ಇದ್ದವು.
1ಇದಲ್ಲದೆ ಸೊಲೊಮೋನನು ತನ್ನ ಮನೆಯನ್ನು ಹದಿಮೂರು ವರುಷಗಳಲ್ಲಿ ಕಟ್ಟಿಸಿ ಅದನ್ನೆಲ್ಲಾ ಮುಗಿಸಿದನು.
2ಇದಲ್ಲದೆ ಅವನು ಲೆಬ ನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಆಗಿತ್ತು; ನಾಲ್ಕು ಸಾಲು ದೇವದಾರು ಕಂಭಗಳ ಮೇಲೆ ಇತ್ತು; ದೇವದಾರು ತೊಲೆಗಳು ಕಂಭಗಳ ಮೇಲೆ ಇದ್ದವು.
3ಒಂದೊಂದು ಸಾಲು ಹದಿನೈದು ಕಂಭಗಳಾಗಿ ನಾಲ್ವತ್ತೈದು ಕಂಭ ಗಳ ಮೇಲೆ ಇರುವ ತೊಲೆಗಳು ದೇವದಾರುಗಳಿಂದ ಮುಚ್ಚಲ್ಪಟ್ಟವು.
4ಮೂರು ಸಾಲು ಕಿಟಿಕಿಗಳು ಇದ್ದವು; ಮೂರು ಸಾಲುಗಳಲ್ಲಿ ಬೆಳಕಿಗೆ ಬೆಳಕು ಎದುರಾಗಿತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ