ಆದರೆ ಕರ್ತನ ಆತ್ಮನು ಸೌಲನನ್ನು ಬಿಟ್ಟು ಹೋದನು;
12ಆಗ ಇಷಯನು ಅವನನ್ನು ಕರೇಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ ಸುಂದರ ಮುಖವುಳ್ಳವ ನಾಗಿಯೂ ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಕರ್ತನು ಸಮುವೇಲನಿಗೆ--ನೀನೆದ್ದು ಇವನನ್ನು ಅಭಿಷೇಕಿಸು; ಇವನೇ ಅವನು ಅಂದನು.
13ಸಮುವೇಲನು ಎಣ್ಣೆ ಇರುವ ಕೊಂಬನ್ನು ತಕ್ಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಕರ್ತನ ಆತ್ಮನು ದಾವೀದನ ಮೇಲೆ ಬಂದನು. ಸಮುವೇಲನು ಎದ್ದು ರಾಮಕ್ಕೆ ಹೋದನು.
14ಆದರೆ ಕರ್ತನ ಆತ್ಮನು ಸೌಲನನ್ನು ಬಿಟ್ಟು ಹೋದನು;
15ಕರ್ತನಿಂದ ಬಂದ ದುರಾತ್ಮವು ಅವ ನನ್ನು ಪೀಡಿಸಿತು. ಆಗ ಸೌಲನ ಸೇವಕರು ಅವ ನಿಗೆ--ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಬಾಧಿಸುತ್ತದೆ;
16ಕಿನ್ನರಿಯನ್ನು ಬಾರಿಸಲು ನಿಪುಣನಾದ ಒಬ್ಬನನ್ನು ಹುಡುಕುವ ಹಾಗೆ ನಮ್ಮ ಒಡೆಯನಾದ ನೀನು ನಿನ್ನ ಸನ್ನಿಧಿಯಲ್ಲಿರುವ ನಿನ್ನ ಸೇವಕರಿಗೆ ಹೇಳ ಬೇಕು. ದೇವರಿಂದ ದುರಾತ್ಮವು ನಿನ್ನ ಮೇಲೆ ಬಂದಿರು ವಾಗ ಅವನು ತನ್ನ ಕೈಯಿಂದ ಅದನ್ನು ಬಾರಿಸಿದರೆ ನಿನಗೆ ಒಳ್ಳೆಯದಾಗಿರುವದು ಅಂದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ