ಹೀಗಾ ದರೆ ನನಗೆ ಇನ್ನೂ ಆದರಣೆ ಇರುವುದು; ಹೌದು, ನಾನು ದುಃಖದಲ್ಲಿ ನನ್ನನ್ನು ಕಠಿಣಪಡಿಸಿಕೊಳ್ಳುವೆನು; ಯಾಕಂದರೆ ಪರಿಶುದ್ಧನ ನುಡಿಗಳನ್ನು ನಾನು ಮರೆ ಮಾಡಲಿಲ್ಲ.
8ನನ್ನ ವಿಜ್ಞಾಪನೆಯನ್ನು ದೇವರು ಲಾಲಿಸಿ, ನಾನು ನಿರೀಕ್ಷಿಸಿದ್ದನ್ನು ಆತನು ಕೊಟ್ಟರೆ ಲೇಸು.
9ನಾನು ನಾಶವಾಗುವದು ದೇವರಿಗೆ ಮೆಚ್ಚಿಕೆಯಾಗುವದಾದರೆ ತನ್ನ ಕೈಚಾಚಿ ನನ್ನನ್ನು ಸಾಯಿಸಿದರೆ ಒಳ್ಳೆದು.
10ಹೀಗಾ ದರೆ ನನಗೆ ಇನ್ನೂ ಆದರಣೆ ಇರುವುದು; ಹೌದು, ನಾನು ದುಃಖದಲ್ಲಿ ನನ್ನನ್ನು ಕಠಿಣಪಡಿಸಿಕೊಳ್ಳುವೆನು; ಯಾಕಂದರೆ ಪರಿಶುದ್ಧನ ನುಡಿಗಳನ್ನು ನಾನು ಮರೆ ಮಾಡಲಿಲ್ಲ.
11ನಾನು ನಿರೀಕ್ಷಿಸುವ ಹಾಗೆ ನನ್ನ ಶಕ್ತಿ ಏನು? ನಾನು ನನ್ನ ಆಯುಷ್ಯವನ್ನು ಹೆಚ್ಚಿಸುವ ಹಾಗೆ ನನ್ನ ಅಂತ್ಯವೇನು?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ