ಯೆರೆಮಿಯ 16:6

ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು; ಅವರು ಹೂಣಿಡಲ್ಪಡುವದಿಲ್ಲ, ಅವರಿ ಗೋಸ್ಕರ ಯಾರೂ ಗೋಳಾಡುವದಿಲ್ಲ; ಅವರಿ ಗೋಸ್ಕರ ತಮ್ಮನ್ನು ಕೊಯ್ದು ಕೊಳ್ಳುವದಿಲ್ಲ, ಬೋಳಿಸಿ ಕೊಳ್ಳುವದೂ ಇಲ್ಲ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 16

4ಅವರು ಬಹು ಕ್ರೂರವಾದ ಮರಣಗಳಿಂದ ಸಾಯುವರು; ಅವರಿಗೋಸ್ಕರ ಗೋಳಾಟ ಆಗುವದಿಲ್ಲ; ಅವರು ಹೂಣಿಡಲ್ಪಡುವದಿಲ್ಲ; ಭೂಮಿಯ ಮೇಲೆ ಅವರು ಗೊಬ್ಬರವಾಗುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರ ವಾಗುವವು.

5ಕರ್ತನು ಹೀಗೆ ಹೇಳುತ್ತಾನೆ--ದುಃಖದ ಮನೆ ಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡು ವದಕ್ಕೂ ದುಃಖಪಡುವದಕ್ಕೂ ಹೋಗಬೇಡ; ನಾನು ನನ್ನ ಸಮಾಧಾನವನ್ನೂ ಕೃಪೆಯನ್ನೂ ಕರುಣೆಯನ್ನೂ ಈ ಜನರಿಂದ ತೆಗೆದುಹಾಕಿದ್ದೇನೆಂದು ಕರ್ತನು ಅನ್ನುತ್ತಾನೆ.

6ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು; ಅವರು ಹೂಣಿಡಲ್ಪಡುವದಿಲ್ಲ, ಅವರಿ ಗೋಸ್ಕರ ಯಾರೂ ಗೋಳಾಡುವದಿಲ್ಲ; ಅವರಿ ಗೋಸ್ಕರ ತಮ್ಮನ್ನು ಕೊಯ್ದು ಕೊಳ್ಳುವದಿಲ್ಲ, ಬೋಳಿಸಿ ಕೊಳ್ಳುವದೂ ಇಲ್ಲ.

7ಸತ್ತವರ ವಿಷಯದಲ್ಲಿ ಅವರನ್ನು ಆದರಿಸುವ ಹಾಗೆ ಜನರು ಹರಿದುಕೊಳ್ಳುವದಿಲ್ಲ; ಅವರ ತಂದೆ ತಾಯಿಗಳ ವಿಷಯವಾದರೋ ಅವರಿಗೆ ಆದರಣೆಯ ಪಾತ್ರೆಯನ್ನು ಕುಡಿಯಲು ಕೊಡುವದಿಲ್ಲ.

8ಅವರ ಸಂಗಡ ಕೂತುಕೊಂಡು ಉಣ್ಣುವದಕ್ಕೂ ಕುಡಿಯುವದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸ ಬೇಡ.

ಯೆರೆಮಿಯ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी