ಹೀಗೆಯೇ ಅಹಾಬನು ತನ್ನ ಪಿತೃಗಳ ಸಂಗಡ ಮಲಗಿದನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಆಳಿದನು.
38ಆ ರಥವು ಸಮಾರ್ಯದ ಕೆರೆಯಲ್ಲಿ ತೊಳೆಯಲ್ಪಡುವಾಗ ಕರ್ತನು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು; ಹಾಗೆಯೇ ಅವರು ಕವಚವನ್ನು ತೊಳೆದರು.
39ಆದರೆ ಅಹಾಬನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ದಂತದ ಮನೆಯೂ ಎಲ್ಲಾ ಪಟ್ಟಣಗಳೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
40ಹೀಗೆಯೇ ಅಹಾಬನು ತನ್ನ ಪಿತೃಗಳ ಸಂಗಡ ಮಲಗಿದನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಆಳಿದನು.
41ಆಸನ ಮಗನಾದ ಯೆಹೋಷಾಫಾಟನು ಇಸ್ರಾ ಯೇಲಿನ ಅರಸನಾದ ಅಹಾಬನ ನಾಲ್ಕನೇ ವರುಷ ದಲ್ಲಿ ಯೆಹೂದದ ಮೇಲೆ ಆಳುವದಕ್ಕೆ ಆರಂಭಿಸಿದನು.
42ಯೆಹೋಷಾಫಾಟನು ಅರಸನಾಗುವಾಗ ಮೂವ ತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಅವಳು ಶಿಲ್ಹಿಯ ಮಗಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ