೨ ಅರಸುಗಳು 4:37

ಆಗ ಅವಳು ಬಂದು ಅವನ ಪಾದಗಳ ಮೇಲೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಮಗನನ್ನು ಎತ್ತಿಕೊಂಡು ಹೋದಳು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 4

35ಆಗ ಅವನು ತಿರುಗಿ ಬಂದು ಮನೆಯಲ್ಲಿ ಸ್ವಲ್ಪಹೊತ್ತು ಅತ್ತಿತ್ತ ತಿರುಗಾಡಿ ಏರಿಹೋಗಿ ಅವನ ಮೇಲೆ ಬೋರ್ಲ ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ತರುವಾಯ ತನ್ನ ಕಣ್ಣುಗಳನ್ನು ತೆರೆದನು.

36ಆಗ ಅವನು ಗೇಹಜಿಯನ್ನು ಕರೆದು--ಶೂನೇಮ್ಯಳನ್ನು ಕರೆ ಅಂದನು. ಅವನು ಅವಳನ್ನು ಕರೆದನು. ಅವಳು ಬಂದಾಗ ಅವನು--ನಿನ್ನ ಕುಮಾರನನ್ನು ತಕ್ಕೊಂಡು ಹೋಗು ಅಂದನು.

37ಆಗ ಅವಳು ಬಂದು ಅವನ ಪಾದಗಳ ಮೇಲೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಮಗನನ್ನು ಎತ್ತಿಕೊಂಡು ಹೋದಳು.

38ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ ದೇಶ ದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಕ್ಕಳು ಅವನ ಮುಂದೆ ಕುಳಿತಿರುವಾಗ ಅವನು ತನ್ನ ಸೇವಕನಿಗೆನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು ಪ್ರವಾದಿಗಳ ಮಕ್ಕಳಿಗೋಸ್ಕರ ಆಹಾರವನ್ನು ಬೇಯಿಸು ಅಂದನು.

39ಒಬ್ಬನು ಪಲ್ಯವನ್ನು ತರಲು ಅಡವಿಗೆ ಹೋಗಿ ಅಡವಿಯ ಬಳ್ಳಿಯನ್ನು ನೋಡಿ ಅಡವಿಯ ಕಾಯಿ ಗಳನ್ನು ತನ್ನ ಉಡಿಯ ತುಂಬ ಕೂಡಿಸಿಕೊಂಡು ಬಂದು ಅವುಗಳನ್ನು ಕೊಯಿದು ಆಹಾರವಿರುವ ಗಡಿಗೆಯಲ್ಲಿ ಹಾಕಿದನು; ಯಾಕಂದರೆ ಅವರು ಅವುಗಳನ್ನು ಅರಿ ಯದೆ ಇದ್ದರು.

೨ ಅರಸುಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी