೧ ಅರಸುಗಳು 7:13

ಆದರೆ ಅರಸನಾದ ಸೊಲೊಮೋನನು ಹೀರಾ ಮನನ್ನು ತೂರಿನಿಂದ ಕರೇಕಳುಹಿಸಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 7

11ಅದರ ಮೇಲೆ ಕೆತ್ತಿದ ಕಲ್ಲುಗಳ ಅಳ ತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ ದೇವದಾರುಗಳೂ ಇದ್ದವು.

12ದೊಡ್ಡ ಅಂಗಳವು ಸುತ್ತಲಾಗಿ ಮೂರು ತರ ಕೆತ್ತಿದ ಕಲ್ಲುಗಳೂ ಒಂದು ತರ ದೇವ ದಾರು ಮರದ ತೊಲೆಗಳೂ ಆಗಿದ್ದವು; ಕರ್ತನ ಮನೆಯ ಒಳ ಅಂಗಳಕ್ಕೂ ಮನೆಯ ದ್ವಾರಾಂಗಳಕ್ಕೂ ಹಾಗೆಯೇ ಇತ್ತು.

13ಆದರೆ ಅರಸನಾದ ಸೊಲೊಮೋನನು ಹೀರಾ ಮನನ್ನು ತೂರಿನಿಂದ ಕರೇಕಳುಹಿಸಿದನು.

14ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು; ಅವನ ತಂದೆ ತೂರಿನ ಮನುಷ್ಯನಾದ ತಾಮ್ರದ ಕೆಲಸದವನಾಗಿದ್ದನು; ಅವನು ತಾಮ್ರದ ಎಲ್ಲಾ ಕೆಲಸವನ್ನು ಮಾಡತಕ್ಕ ಜ್ಞಾನ ದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಪೂರ್ಣನಾಗಿದ್ದನು. ಅವನು ಅರಸನಾದ ಸೊಲೊ ಮೋನನ ಬಳಿಗೆ ಬಂದು ಅವನ ಕೆಲಸವನ್ನೆಲ್ಲಾ ಮಾಡಿದನು.

15ಅವನು ಎರಡು ತಾಮ್ರದ ಸ್ತಂಭಗಳನ್ನು ಮಾಡಿ ದನು. ಒಂದೊಂದು ಸ್ತಂಭ ಹದಿನೆಂಟು ಮೊಳ ಉದ್ದ; ಒಂದೊಂದು ಸ್ತಂಭದ ಸುತ್ತಳತೆ ಹನ್ನೆರಡು ಮೊಳ ಇತ್ತು.

೧ ಅರಸುಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी