ಅಲ್ಲಿಂದ ಅವನು ಬೇರ್ಷೆಬಕ್ಕೆ ಏರಿಹೋದನು.
21ತರುವಾಯ ಅವರು ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿಯೂ ಅವರು ಜಗಳವಾಡಿದಾಗ ಅವನು ಅದಕ್ಕೆ ಸಿಟ್ನಾ ಎಂದು ಹೆಸರಿಟ್ಟನು.
22ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು.
23ಅಲ್ಲಿಂದ ಅವನು ಬೇರ್ಷೆಬಕ್ಕೆ ಏರಿಹೋದನು.
24ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ ಕಾಣಿಸಿ ಕೊಂಡು--ನಿನ್ನ ತಂದೆಯಾದ ಅಬ್ರಹಾಮನ ದೇವರು ನಾನೇ; ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು ಅಂದನು.
25ಆಗ ಅವನು ಬಲಿಪೀಠವನ್ನು ಕಟ್ಟಿ ಕರ್ತನ ಹೆಸರನ್ನು ಹೇಳಿಕೊಂಡು ಅಲ್ಲಿ ತನ್ನ ಗುಡಾರ ವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ