೧ ಅರಸುಗಳು 3:11

ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ

ಸಂದರ್ಭದೊಂದಿಗೆ ಓದಿ · ೧ ಅರಸುಗಳು 3

9ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.

10ಸೊಲೊಮೋನನು ಕೇಳಿದ ಈ ಮಾತು ಕರ್ತನ ದೃಷ್ಟಿಗೆ ಒಳ್ಳೇದಾಗಿತ್ತು.

11ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ

12ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ.

13ನೀನು ಕೇಳದ ಐಶ್ವ ರ್ಯವನ್ನೂ ಘನವನ್ನೂ ಕೊಟ್ಟಿದ್ದೇನೆ. ಆದದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸು ಗಳಲ್ಲಿ ಒಬ್ಬನೂ ಇರುವದಿಲ್ಲ.

೧ ಅರಸುಗಳು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी