೧ ಸಮುವೇಲನು 10:24

ಆಗ ಸಮುವೇಲನು ಸಮಸ್ತ ಜನರಿಗೆ--ಕರ್ತನು ಆದುಕೊಂಡವನನ್ನು ನೋಡಿರಿ; ಎಲ್ಲಾ ಜನರಲ್ಲಿ ಇವನಿಗೆ ಸಮಾನನಾದವನು ಯಾವನೂ ಇಲ್ಲವಲ್ಲಾ ಅಂದನು. ಜನರೆಲ್ಲರೂ ಆರ್ಭಟಿಸಿ--ಅರಸನಾದವನು ಬಾಳಲಿ ಅಂದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 10

22ಆದದರಿಂದ ಅವನು ಈಗ ಇಲ್ಲಿ ಬರುವನೋ ಎಂದು ಕರ್ತನನ್ನು ವಿಚಾರಿಸಿದರು. ಕರ್ತನು--ಇಗೋ, ಅವನು ಸಾಮಗ್ರಿ ಯಲ್ಲಿ ಅಡಗಿಕೊಂಡಿದ್ದಾನೆ ಎಂದು ಹೇಳಿದನು.

23ಆಗ ಅವರು ಓಡಿಹೋಗಿ ಅಲ್ಲಿಂದ ಅವನನ್ನು ಕರೆತಂದರು. ಅವನು ಜನರ ಮಧ್ಯದಲ್ಲಿ ನಿಲ್ಲುವಾಗ ಅವನು ತನ್ನ ಭುಜದಿಂದ ಎಲ್ಲಾ ಜನರಿಗಿಂತ ಎತ್ತರವಾಗಿದ್ದನು.

24ಆಗ ಸಮುವೇಲನು ಸಮಸ್ತ ಜನರಿಗೆ--ಕರ್ತನು ಆದುಕೊಂಡವನನ್ನು ನೋಡಿರಿ; ಎಲ್ಲಾ ಜನರಲ್ಲಿ ಇವನಿಗೆ ಸಮಾನನಾದವನು ಯಾವನೂ ಇಲ್ಲವಲ್ಲಾ ಅಂದನು. ಜನರೆಲ್ಲರೂ ಆರ್ಭಟಿಸಿ--ಅರಸನಾದವನು ಬಾಳಲಿ ಅಂದರು.

25ಸಮುವೇಲನು ರಾಜ್ಯದ ಪದ್ಧತಿ ಯನ್ನು ಜನರಿಗೆ ಹೇಳಿಕೊಟ್ಟು ಒಂದು ಪುಸ್ತಕದಲ್ಲಿ ಬರೆದು ಕರ್ತನ ಮುಂದೆ ಇಟ್ಟನು. ಆಗ ಸಮುವೇಲನು ಜನರನ್ನೆಲ್ಲಾ ಅವರವರ ಮನೆಗೆ ಕಳುಹಿಸಿಬಿಟ್ಟನು.

26ಸೌಲನು ಗಿಬೆಯಲ್ಲಿರುವ ತನ್ನ ಮನೆಗೆ ಹೋದನು. ದೇವರು ಯಾರ ಹೃದಯವನ್ನು ಮುಟ್ಟಿದನೋ ಅವ ರದು ಒಂದು ಗುಂಪು ಅವನ ಸಂಗಡ ಹೋಯಿತು.

೧ ಸಮುವೇಲನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी