೨ ಸಮುವೇಲನು 3:37

ನೇರನ ಮಗನಾದ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದ ದ್ದಲ್ಲವೆಂದು ಎಲ್ಲಾ ಜನರೂ ಸಮಸ್ತ ಇಸ್ರಾಯೇಲ್ಯರೂ ಆ ದಿನದಲ್ಲಿ ತಿಳಿದುಕೊಂಡರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 3

35ಇನ್ನೂ ಹೊತ್ತಿರು ವಾಗಲೇ ಜನರೆಲ್ಲರು ಬಂದು-- ಊಟಮಾಡು ಎಂದು ದಾವೀದನಿಗೆ ಹೇಳಿದಾಗ ದಾವೀದನು--ಸೂರ್ಯನು ಅಸ್ತಮಿಸುವದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾ ದರೂ ಮತ್ತೇನಾದರೂ ರುಚಿ ನೋಡಿದರೆ ದೇವರು ನನಗೆ ಹಾಗೇ ಮಾಡಲಿ, ಅಧಿಕವಾಗಿಯೂ ಮಾಡ ಲೆಂದು ಆಣೆಇಟ್ಟು ಹೇಳಿದನು.

36ಜನರೆಲ್ಲರು ಅದನ್ನು ತಿಳಿದುಕೊಂಡಾಗ ಅವರೆಲ್ಲರಿಗೆ ಮೆಚ್ಚಿಕೆಯಾಯಿತು. ಹಾಗೆಯೇ ಅರಸನು ಏನೇನು ಮಾಡಿದನೋ ಅದು ಜನರಿಗೆ ಮೆಚ್ಚಿಕೆಯಾಗಿತ್ತು.

37ನೇರನ ಮಗನಾದ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದ ದ್ದಲ್ಲವೆಂದು ಎಲ್ಲಾ ಜನರೂ ಸಮಸ್ತ ಇಸ್ರಾಯೇಲ್ಯರೂ ಆ ದಿನದಲ್ಲಿ ತಿಳಿದುಕೊಂಡರು.

38ಇದಲ್ಲದೆ ಅರಸನು ತನ್ನ ಸೇವಕರಿಗೆ--ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿ ಲ್ಲವೋ?

39ನಾನು ಅರಸನಾಗಿ ಅಭಿಷೇಕಿಸ ಲ್ಪಟ್ಟಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಕುಮಾರ ರಾದ ಈ ಮನುಷ್ಯರು ನನಗೆ ಕಠಿಣರಾಗಿದ್ದಾರೆ. ಕೆಟ್ಟತನ ಮಾಡುವವನಿಗೆ ಕರ್ತನು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವನು ಅಂದನು.

೨ ಸಮುವೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी