೧ ಪೂರ್ವಕಾಲವೃತ್ತಾಂತ 10:7

ಅವರು ಓಡಿಹೋದರೆಂದೂ ಸೌಲನೂ ಅವನ ಕುಮಾರರೂ ಸತ್ತರೆಂದೂ ತಗ್ಗಿನಲ್ಲಿದ್ದ ಇಸ್ರಾಯೇಲ್‌ ಜನರೆಲ್ಲರೂ ಕಂಡಾಗ ಅವರು ತಮ್ಮ ಪಟ್ಟಣ ಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸವಾಗಿದ್ದರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 10

5ಸೌಲನು ಸತ್ತನೆಂದು ಅವನ ಆಯುಧ ಹಿಡಿಯುವವನು ಕಂಡಾಗ ಅವನು ಹಾಗೆಯೇ ಕತ್ತಿಯ ಮೇಲೆ ಬಿದ್ದು ಸತ್ತುಹೋದನು.

6ಸೌಲನೂ ಅವನ ಮೂರು ಮಂದಿ ಕುಮಾರರೂ ಅವನ ಮನೆಯವರೆಲ್ಲರೂ ಒಟ್ಟಾಗಿ ಸತ್ತುಹೋದರು.

7ಅವರು ಓಡಿಹೋದರೆಂದೂ ಸೌಲನೂ ಅವನ ಕುಮಾರರೂ ಸತ್ತರೆಂದೂ ತಗ್ಗಿನಲ್ಲಿದ್ದ ಇಸ್ರಾಯೇಲ್‌ ಜನರೆಲ್ಲರೂ ಕಂಡಾಗ ಅವರು ತಮ್ಮ ಪಟ್ಟಣ ಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸವಾಗಿದ್ದರು.

8ಮಾರನೆ ದಿವಸದಲ್ಲಿ ಏನಾಯಿತಂದರೆ, ಫಿಲಿಷ್ಟಿ ಯರು ಕೊಲ್ಲಲ್ಪಟ್ಟವರನ್ನು ಸುಲುಕೊಳ್ಳಲು ಬಂದಾಗ ಗಿಲ್ಬೋಯ ಬೆಟ್ಟದಲ್ಲಿ ಬಿದ್ದಿದ್ದ ಸೌಲನನ್ನೂ ಅವನ ಕುಮಾರರನ್ನೂ ಕಂಡುಕೊಂಡರು.

9ಅವರು ಅವನನ್ನು ಸುಲುಕೊಂಡು ಅವನ ತಲೆಯನ್ನೂ ಆಯುಧಗಳನ್ನೂ ಎತ್ತಿಕೊಂಡುಹೋಗಿ ತಮ್ಮ ವಿಗ್ರಹಗಳಿಗೂ ಜನರಿಗೂ ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿ ಸಿದರು.

೧ ಪೂರ್ವಕಾಲವೃತ್ತಾಂತ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी