ಆದಿಕಾಂಡ 35:6

ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್‌ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್‌.

ಸಂದರ್ಭದೊಂದಿಗೆ ಓದಿ · ಆದಿಕಾಂಡ 35

4ಆಗ ಅವರು ತಮ್ಮ ಕೈಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವು ಗಳನ್ನೂ ತೆಗೆದು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮಿಗೆ ಸವಿಾಪವಾಗಿದ್ದ ಏಲಾಮರದ ಕೆಳಗೆ ಹೂಣಿಟ್ಟನು.

5ತರುವಾಯ ಅವರು ಪ್ರಯಾಣ ವಾಗಿ ಹೊರಟರು. ಆಗ ದೇವರ ಭಯವು ಸುತ್ತಲಿರುವ ಪಟ್ಟಣಗಳವರ ಮೇಲೆ ಇದ್ದದರಿಂದ ಅವರು ಯಾಕೋ ಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.

6ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್‌ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್‌.

7ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್‌ ಬೇತೇಲ್‌ ಎಂದು ಹೆಸರಿಟ್ಟನು.

8ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಸತ್ತಳು. ಬೇತೇಲಿನ ಕೆಳಗಿದ್ದ ಅಲ್ಲೋನ್‌ ಮರದ ಬುಡದಲ್ಲಿ ಆಕೆಯನ್ನು ಹೂಣಿಟ್ಟರು. ಆ ಸ್ಥಳಕ್ಕೆ ಅಲ್ಲೋನ್‌ ಬಾಕೂತ್‌ ಎಂದು ಹೆಸರಾಯಿತು.

ಆದಿಕಾಂಡ 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी