೨ ಕೊರಿಂಥದವರಿಗೆ 12:5

ಅಂಥವನನ್ನು ಕುರಿತು ಹೆಚ್ಚಳಪಡುವೆನು, ನನ್ನನ್ನು ಕುರಿತಾದರೋ ನನ್ನ ನಿರ್ಬಲಾವಸ್ಥೆಗಳಲ್ಲಿಯೇ ಹೊರತು ಬೇರೆ ಹೆಚ್ಚಳ ಪಡುವದಿಲ್ಲ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 12

3ಅಂಥ ಮನುಷ್ಯನೊಬ್ಬನನ್ನು ನಾನು ಬಲ್ಲೆನು; (ಅವನು ದೇಹಸಹಿತನಾಗಿದ್ದನೋ ದೇಹ ರಹಿತನಾಗಿದ್ದನೋ ನಾನು ಹೇಳಲಾರೆನು, ದೇವರೇ ಬಲ್ಲನು;)

4ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯನು ನುಡಿಯಲಶಕ್ಯವಾದ ಆಡಲಾಗದ ಮಾತುಗಳನ್ನು ಕೇಳಿದನು.

5ಅಂಥವನನ್ನು ಕುರಿತು ಹೆಚ್ಚಳಪಡುವೆನು, ನನ್ನನ್ನು ಕುರಿತಾದರೋ ನನ್ನ ನಿರ್ಬಲಾವಸ್ಥೆಗಳಲ್ಲಿಯೇ ಹೊರತು ಬೇರೆ ಹೆಚ್ಚಳ ಪಡುವದಿಲ್ಲ.

6ಹೊಗಳಿಕೊಳ್ಳುವದಕ್ಕೆ ನನಗೆ ಮನಸ್ಸಿ ದ್ದರೂ ನಾನು ಬುದ್ದಿಹೀನನಾಗುವದಿಲ್ಲ. ಯಾಕಂದರೆ ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾವನೂ ನನ್ನಲ್ಲಿ ಕಾಣುವದಕ್ಕಿಂತಲೂ ನನ್ನಿಂದ ಕೇಳುವದ ಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕುರಿತು ಎಣಿಸದಂತೆ ನಾನು ಮೌನವಾಗಿರುವೆನು;

7ಇದಲ್ಲದೆ ಹೇರಳವಾದ ಪ್ರಕಟಣೆಗಳ ಮೂಲಕ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಬಾರದೆಂದು ನನ್ನನ್ನು ಗುದ್ದುವದಕ್ಕಾಗಿ ಸೈತಾನನ ದೂತನಂತೆ ನನ್ನ ಶರೀರದಲ್ಲಿ ಒಂದು ಮುಳ್ಳು ನನಗೆ ಕೊಡಲ್ಪಟ್ಟಿದೆ; ಹೀಗೆ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಲಾರದಂತೆ ಇದಾಯಿತು.

೨ ಕೊರಿಂಥದವರಿಗೆ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी