ಆದಿಕಾಂಡ 41:44

ಇದಲ್ಲದೆ ಫರೋಹನು ಯೋಸೇಫನಿಗೆ--ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಐಗುಪ್ತದೇಶ ದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ ಕಾಲ ನ್ನಾಗಲಿ ಎತ್ತಬಾರದು ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 41

42ಇದಲ್ಲದೆ ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು ನಾರುಮಡಿಯ ವಸ್ತ್ರವನ್ನು ತೊಡಿಸಿ ಚಿನ್ನದ ಸರವನ್ನು ಅವನ ಕೊರಳಿಗೆ ಹಾಕಿದನು.

43ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂರಿಸಿ ದಾಗ--ಅವನ ಮುಂದೆ ಮೊಣಕಾಲೂರಿರಿ ಎಂದು ಜನರು ಕೂಗಿದರು. ಹೀಗೆ ಅವನನ್ನು ಐಗುಪ್ತ ದೇಶದ ಮೇಲೆಲ್ಲಾ ಆಳುವವನನ್ನಾಗಿ ನೇಮಿಸಿದನು.

44ಇದಲ್ಲದೆ ಫರೋಹನು ಯೋಸೇಫನಿಗೆ--ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಐಗುಪ್ತದೇಶ ದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ ಕಾಲ ನ್ನಾಗಲಿ ಎತ್ತಬಾರದು ಅಂದನು.

45ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್‌ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು.

46ಯೋಸೇಫನು ಐಗುಪ್ತದ ಅರಸನಾದ ಫರೋ ಹನ ಮುಂದೆ ನಿಂತಾಗ ಮೂವತ್ತು ವರುಷದ ವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶವನ್ನೆಲ್ಲಾ ಸಂಚರಿಸಿದನು.

ಆದಿಕಾಂಡ 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी