ಯೆರೆಮಿಯ 20:7

ಓ ಕರ್ತನೇ, ನೀನು ನನ್ನನ್ನು ವಂಚಿಸಿದಿ; ನಾನು ವಂಚಿಸಲ್ಪಟ್ಟೆನು. ನೀನು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿ; ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿ ಯಾಗಿದ್ದೇನೆ; ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡು ತ್ತಾನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 20

5ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ ಅದರ ಎಲ್ಲಾ ಕಷ್ಟಾರ್ಜಿತವನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ ಯೆಹೂ ದದ ಅರಸರ ಎಲ್ಲಾ ಭಂಡಾರಗಳನ್ನೂ ಒಪ್ಪಿಸುವೆನು; ಶತ್ರುಗಳ ಕೈಗೆ ಅವರನ್ನು ಒಪ್ಪಿಸುವೆನು. ಅವರು ಅವುಗಳನ್ನು ಸುಲುಕೊಂಡು ತಕ್ಕೊಂಡು ಬಾಬೆಲಿಗೆ ಒಯ್ಯುವರು.

6ಪಷ್ಹೂರನೇ, ನೀನೂ ನಿನ್ನ ಮನೆಯ ನಿವಾಸಿಗಳೆಲ್ಲರೂ ಸೆರೆಗೆ ಹೋಗುವಿರಿ; ಬಾಬೆಲಿಗೆ ಹೋಗಿ ಅಲ್ಲಿಯೇ ಸಾಯುವಿ, ಅಲ್ಲಿಯೇ ಹೂಣಿಡ ಲ್ಪಡುವಿ; ನಿನಗೂ ನಿನ್ನಿಂದ ಸುಳ್ಳು ಪ್ರವಾದನೆ ಕೇಳಿದ ನಿನ್ನ ಸ್ನೇಹಿತರೆಲ್ಲರಿಗೂ ಹಾಗೆಯೇ ಆಗುವದು.

7ಓ ಕರ್ತನೇ, ನೀನು ನನ್ನನ್ನು ವಂಚಿಸಿದಿ; ನಾನು ವಂಚಿಸಲ್ಪಟ್ಟೆನು. ನೀನು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿ; ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿ ಯಾಗಿದ್ದೇನೆ; ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡು ತ್ತಾನೆ.

8ನಾನು ಮಾತನಾಡುವನಾದದ್ದರಿಂದ ಗಟ್ಟಿಯಾಗಿ ಕೂಗುತ್ತೇನೆ; ಬಲಾತ್ಕಾರವೂ ಕೊಳ್ಳೆಯೂ ಎಂದು ಕೂಗುತ್ತೇನೆ ಕರ್ತನ ವಾಕ್ಯವು ನನಗೆ ಪ್ರತಿದಿನ ಪರಿಹಾಸ್ಯಕ್ಕೂ ಗೇಲಿಗೂ ಆಯಿತು.

9ಆಗ ನಾನು ಆತನನ್ನು ಕುರಿತು ಏನೂ ಹೇಳುವದಿಲ್ಲ, ಇಲ್ಲವೆ ಆತನ ಹೆಸರಿನಲ್ಲಿ ಇನ್ನು ಮಾತನಾಡುವದೇ ಇಲ್ಲ ಎಂದು ಅಂದುಕೊಂಡೆನು; ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲ್ಪಟ್ಟಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು; ಬಿಗಿಹಿಡಿದು ದಣಿ ದೆನು. ನನ್ನಿಂದ ಆಗದೆ ಹೋಯಿತು.

ಯೆರೆಮಿಯ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी