೧ ಸಮುವೇಲನು 20:9

ಯೋನಾತಾನನು--ಅದು ನಿನಗೆ ದೂರವಾಗಿರಲಿ; ಯಾಕಂದರೆ ಕೇಡು ನಿನ್ನ ಮೇಲೆ ಬರುವಂತೆ ನನ್ನ ತಂದೆಯಿಂದ ನಿಷ್ಕರ್ಷೆ ಮಾಡಲ್ಪಟ್ಟಿತೆಂದು ನಿಜವಾಗಿ ತಿಳಿದಿದ್ದರೆ ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ ಅಂದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 20

7ಅದಕ್ಕೆ ಅವನು --ಒಳ್ಳೇದೆಂದು ಹೇಳಿದರೆ ನಿನ್ನ ಸೇವಕನಿಗೆ ಸಮಾಧಾನ ವಾಗಿರುವದು; ಅವನು ಬಹಳ ಕೋಪಮಾಡಿದರೆ ಅವನಿಂದ ಕೇಡು ಸ್ಥಿರಮಾಡಲ್ಪಟ್ಟಿತೆಂದು ತಿಳುಕೋ.

8ಆದದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು; ಯಾಕಂದರೆ ಕರ್ತನ ಒಡಂಬಡಿಕೆ ಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀ ಯಲ್ಲಾ. ಆದಾಗ್ಯೂ ನನ್ನಲ್ಲಿ ಅಕ್ರಮವಿದ್ದರೆ ನೀನೇ ನನ್ನನ್ನು ಕೊಂದುಹಾಕು; ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವದು ಯಾಕೆ ಅಂದನು.

9ಯೋನಾತಾನನು--ಅದು ನಿನಗೆ ದೂರವಾಗಿರಲಿ; ಯಾಕಂದರೆ ಕೇಡು ನಿನ್ನ ಮೇಲೆ ಬರುವಂತೆ ನನ್ನ ತಂದೆಯಿಂದ ನಿಷ್ಕರ್ಷೆ ಮಾಡಲ್ಪಟ್ಟಿತೆಂದು ನಿಜವಾಗಿ ತಿಳಿದಿದ್ದರೆ ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ ಅಂದನು.

10ದಾವೀದನು ಯೋನಾತಾನನಿಗೆ--ನಿನ್ನ ತಂದೆಯು ನಿನಗೆ ಕಠಿಣವಾದ ಪ್ರತ್ಯುತ್ತರ ಹೇಳಿದರೆ ಅದನ್ನು ನನಗೆ ತಿಳಿಸುವವನು ಯಾರು ಅಂದನು.

11ಯೋನಾತಾನನು ದಾವೀದನಿಗೆ--ನಾವು ಹೊಲಕ್ಕೆ ಹೋಗೋಣ ಬಾ ಅಂದನು. ಹಾಗೆಯೇ ಅವರಿಬ್ಬರು ಹೊಲಕ್ಕೆ ಹೊರಟುಹೋದರು.

೧ ಸಮುವೇಲನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी