ಕೊಲೊಸ್ಸೆಯವರಿಗೆ 2:10

ನೀವು ಆತನಲ್ಲಿದ್ದು ಕೊಂಡೇ ಪರಿಪೂರ್ಣತೆಯನ್ನು ಹೊಂದಿದವರಾಗಿ ದ್ದೀರಿ. ಆತನು ಎಲ್ಲಾ ದೊರೆತನಕ್ಕೂ ಅಧಿಕಾರಕ್ಕೂ ಶಿರಸ್ಸಾಗಿದ್ದಾನೆ.

ಸಂದರ್ಭದೊಂದಿಗೆ ಓದಿ · ಕೊಲೊಸ್ಸೆಯವರಿಗೆ 2

8ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನ ಬೋಧನೆ ಯಿಂದ ನಿಮ್ಮನ್ನು ಕೆಡಿಸಿಬಿಟ್ಟಾರು, ಎಚ್ಚರಿಕೆಯಾಗಿರ್ರಿ.

9ಕ್ರಿಸ್ತನಲ್ಲಿಯೇ ದೈವತ್ವ ಸರ್ವಸಂಪೂರ್ಣತೆಯು ಶಾರೀ ರಕವಾಗಿ ವಾಸಮಾಡುತ್ತದೆ.

10ನೀವು ಆತನಲ್ಲಿದ್ದು ಕೊಂಡೇ ಪರಿಪೂರ್ಣತೆಯನ್ನು ಹೊಂದಿದವರಾಗಿ ದ್ದೀರಿ. ಆತನು ಎಲ್ಲಾ ದೊರೆತನಕ್ಕೂ ಅಧಿಕಾರಕ್ಕೂ ಶಿರಸ್ಸಾಗಿದ್ದಾನೆ.

11ನೀವು ಆತನಲ್ಲಿ ಸುನ್ನತಿಯನ್ನೂ ಹೊಂದಿದ್ದಿರಿ; ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ; ಇದು ಕ್ರಿಸ್ತನಿಂದಾದ ಸುನ್ನತಿಯಾಗಿದ್ದು ಪಾಪದ ಶರೀರ ವನ್ನು ವಿಸರ್ಜಿಸುವದೇ.

12ಾಪ್ತಿಸ್ಮದಲ್ಲಿ ಆತನೊಂದಿಗೆ ಹೂಣಲ್ಪಟ್ಟು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಕಾರ್ಯದಲ್ಲಿ ನಂಬಿಕೆಯಿಟ್ಟಿರುವದರಿಂದ ನೀವು ಸಹ ಅದರಲ್ಲಿ (ಬಾಪ್ತಿಸ್ಮದಲ್ಲಿ) ಎಬ್ಬಿಸಲ್ಪಟ್ಟಿದ್ದೀರಿ.

ಕೊಲೊಸ್ಸೆಯವರಿಗೆ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी