ಹೋಶೇ 14:2

ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.

ಸಂದರ್ಭದೊಂದಿಗೆ ಓದಿ · ಹೋಶೇ 14

1ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ;

2ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.

3ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ.

4ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ.

ಹೋಶೇ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी