ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು.
29(ಮುಂಚೆ ಎಫೆಸದವನಾದ ತ್ರೊಫಿಮನನ್ನು ಪೌಲನೊಂದಿಗೆ ಆ ಪಟ್ಟಣದಲ್ಲಿ ಅವರು ಕಂಡಿದ್ದರಿಂದ ಅವನನ್ನು ದೇವಾಲಯದೊಳಗೆ ಪೌಲನು ಕರೆದುಕೊಂಡು ಬಂದಿದ್ದನೆಂದು ಭಾವಿಸಿದರು).
30ಆಗ ಪಟ್ಟಣವೆಲ್ಲಾ ಕದಲಿಹೋಯಿತು. ಜನರು ಒಟ್ಟಾಗಿ ಓಡಿಬಂದು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದ ಕೂಡಲೆ ಬಾಗಿಲುಗಳು ಮುಚ್ಚಲ್ಪಟ್ಟವು.
31ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು.
32ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ತೆಗೆದುಕೊಂಡು ಅವರ ಬಳಿಗೆ ಓಡಿ ಬಂದನು. ಅವರು ಮುಖ್ಯ ನಾಯಕನನ್ನೂ ಸೈನಿಕರನ್ನೂ ನೋಡಿ ಪೌಲನನ್ನು ಹೊಡೆಯುವದನ್ನು ಬಿಟ್ಟರು.
33ಮುಖ್ಯ ನಾಯಕನು ಹತ್ತರಕ್ಕೆ ಬಂದು ಅವನನ್ನು ಹಿಡಿದು ಅವನಿಗೆ ಜೋಡು ಸರಪಣಿಯಿಂದ ಕಟ್ಟಬೇಕೆಂದು ಅಪ್ಪಣೆ ಕೊಟ್ಟು--ಅವನು ಯಾರು? ಏನು ಮಾಡಿದ್ದಾನೆ ಎಂದು ಕೇಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ