ಯೆಶಾಯ 41:18

ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.

ಸಂದರ್ಭದೊಂದಿಗೆ ಓದಿ · ಯೆಶಾಯ 41

16ನೀನು ಅವುಗಳನ್ನು ತೂರಲು ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವದು; ನೀನಂತೂ ಕರ್ತನಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧನಲ್ಲಿ ಮಹಿಮೆಹೊಂದುವಿ.

17ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್‌ ದೇವ ರಾಗಿರುವ ನಾನು ಅವರನ್ನು ಕೈಬಿಡೆನು.

18ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.

19ಅರಣ್ಯದಲ್ಲಿ ದೇವದಾರು, ಜಾಲಿಮರ, ಸುಗಂಧ, ಒಲೀವ ಮರಗಳನ್ನು ನಾನು ನೆಡುವೆನು, ಮರುಭೂಮಿಯಲ್ಲಿ ತುರಾಯಿ, ತಪಸಿಟ್ಟಿ, ತಿಲಕವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.

20ಆಗ ಕರ್ತನ ಹಸ್ತವು ಇದನ್ನು ಮಾಡಿದೆ ಎಂದೂ ಇಸ್ರಾ ಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ ಅವರು ನೋಡಿ, ತಿಳಿದು ಮನಸ್ಸಿಗೆ ತಂದು ಗ್ರಹಿಸಿ ಕೊಳ್ಳುವರು.

ಯೆಶಾಯ 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी