ಯೆಹೆಜ್ಕೇಲನು 3:5

ನೀನು ಕಠಿಣವಾದ ಭಾಷೆಯಲ್ಲಿ ಸೋಜಿಗದ ಮಾತುಗಳ ನ್ನಾಡುವ ಜನರ ಬಳಿಗೆ ಕಳುಹಿಸದೆ ಇಸ್ರಾಯೇಲಿನ ಮನೆಯವರ ಬಳಿಗೆ ಕಳುಹಿಸಲ್ಪಟ್ಟಿರುವಿ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 3

3ಆಗ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ನಾನು ಕೊಡುವ ಈ ಸುರಳಿಯನ್ನು ತಿಂದು ಹೊಟ್ಟೆಯ ಕರುಳುಗಳನ್ನು ತುಂಬಿಸಿಕೋ ಅಂದನು. ಆಗ ನಾನು ಅದನ್ನು ತಿನ್ನಲು ಅದು ನನ್ನ ಬಾಯಲ್ಲಿ ಜೇನಿನ ಹಾಗೆ ಸಿಹಿಯಾಗಿತ್ತು.

4ನನಗೆ ಆತನು--ಮನುಷ್ಯಪುತ್ರನೇ, ಹೋಗು; ಇಸ್ರಾಯೇಲ್ಯರ ಮನೆಯವರ ಬಳಿಗೆ ಹೋಗಿ ಅವರ ಸಂಗಡ ನನ್ನ ಮಾತುಗಳನ್ನು ಮಾತನಾಡು.

5ನೀನು ಕಠಿಣವಾದ ಭಾಷೆಯಲ್ಲಿ ಸೋಜಿಗದ ಮಾತುಗಳ ನ್ನಾಡುವ ಜನರ ಬಳಿಗೆ ಕಳುಹಿಸದೆ ಇಸ್ರಾಯೇಲಿನ ಮನೆಯವರ ಬಳಿಗೆ ಕಳುಹಿಸಲ್ಪಟ್ಟಿರುವಿ.

6ನೀನು ಕಠಿಣ ಭಾಷೆಯಲ್ಲಿ ಸೋಜಿಗದ ಮಾತುಗಳನ್ನಾಡುವವರ ಬಳಿಗೆ ಕಳುಹಿಸಲ್ಪಟ್ಟವನಲ್ಲ; ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ್ದ ಪಕ್ಷದಲ್ಲಿ ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು.

7ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ.

ಯೆಹೆಜ್ಕೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी