ಪರಮ ಗೀತ 6:11

ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು.

ಸಂದರ್ಭದೊಂದಿಗೆ ಓದಿ · ಪರಮ ಗೀತ 6

9ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ; ಅವಳು ತನ್ನ ತಾಯಿಗೆ ಒಬ್ಬಳೇ. ತನ್ನ ಹೆತ್ತವಳಿಗೆ ಆಯಲ್ಪಟ್ಟವಳಾಗಿದ್ದಾಳೆ, ಕುಮಾರ್ತೆಯರು ಅವ ಳನ್ನು ನೋಡಿ ಆಶೀರ್ವದಿಸಿದರು; ಹೌದು, ರಾಣಿ ಯರೂ ಉಪಪತ್ನಿಯರೂ ಅವಳನ್ನು ಹೊಗಳಿದರು.

10ಚಂದ್ರನ ಹಾಗೆ ಸುಂದರಿಯೂ ಸೂರ್ಯನ ಹಾಗೆ ನಿರ್ಮಲವಾದವಳೂ ಧ್ವಜಗಳಿರುವ ದಂಡಿನ ಹಾಗೆ ಭಯಂಕರವಾದವಳೂ ಉದಯದ ಹಾಗೆ ದೃಷ್ಟಿಸಿ ನೋಡುವವಳೂ ಆಗಿರುವ ಇವಳು ಯಾರು?

11ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು.

12ನಾನು ತಿಳಿದಿದ್ದಾಗ ನನ್ನ ಪ್ರಾಣವು ನನ್ನನ್ನು ಅಮ್ಮಿನಾದಿಬ್‌ನ ರಥಗಳ ಹಾಗೆ ಮಾಡಿತು.

13ತಿರಿಗಿ ಬಾ, ತಿರಿಗಿ ಬಾ, ಓ ಶೂಲಮ್‌ನವಳೇ; ನಾವು ನಿನ್ನನ್ನು ದೃಷ್ಟಿಸುವ ಹಾಗೆ ತಿರಿಗಿ ಬಾ, ತಿರಿಗಿ ಬಾ. ಎರಡು ಸೈನ್ಯದ ಗುಂಪಿನವರ ಹಾಗೆಯೇಶೂಲಮ್ಯಳಲ್ಲಿ ನೀವು ದೃಷ್ಟಿಸಬೇಕಾದದ್ದೇನು?

ಪರಮ ಗೀತ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी