ಅಪೊಸ್ತಲರ ಕೃತ್ಯಗಳು 7:35

ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 7

33ಕರ್ತನು ಅವನಿಗೆ--ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿ.

34ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು.

35ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು.

36ಅವನು ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರ ದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತ ಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದ ಮೇಲೆ ಅವರನ್ನು ನಡೆಸಿಕೊಂಡು ಬಂದನು.

37ನಿಮ್ಮ ದೇವರಾದ ಕರ್ತನು ನನ್ನನ್ನು ಎಬ್ಬಿಸಿದಂತೆ ನಿಮ್ಮ ಸಹೋದರರಲ್ಲಿ ಒಬ್ಬ ಪ್ರವಾದಿಯನ್ನು ನಿಮ ಗಾಗಿ ಎಬ್ಬಿಸುವನು; ನೀವು ಆತನ ಮಾತಿಗೆ ಕಿವಿಗೊಡ ಬೇಕೆಂದು ಇಸ್ರಾಯೇಲ್‌ ಜನರಿಗೆ ಹೇಳಿದ ಆ ಮೋಶೆಯು ಇವನೇ.

ಅಪೊಸ್ತಲರ ಕೃತ್ಯಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी