೨ ಕೊರಿಂಥದವರಿಗೆ 2:5

ಆದರೆ ನಾನು ನಿಮ್ಮ ಮೇಲೆ ವಿಶೇಷವಾದ ಭಾರವನ್ನು ಹಾಕದಂತೆ ಯಾವನಾದರೂ ದುಃಖ ವನ್ನುಂಟು ಮಾಡಿದ್ದರೆ ಅವನು ಸ್ವಲ್ಪ ಮಟ್ಟಿಗೆ ನನ್ನನ್ನು ದುಃಖಪಡಿಸಿದ್ದಾನೆ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 2

3ನಾನು ಬಂದಾಗ ನನ್ನನು ಸಂತೋಷಪಡಿಸತಕ್ಕವರಿಂದ ದುಃಖ ಹೊಂದಬಾರ ದೆಂದೂ ನನ್ನ ಸಂತೋಷವು ನಿಮ್ಮೆಲ್ಲರ ಸಂತೋಷವೇ ಎಂದೂ ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸ ವಿರುವದರಿಂದ ನಾನು ನಿಮಗೆ ಇದನ್ನು ಬರೆದಿದ್ದೇನೆ.

4ನಿಮಗೆ ದುಃಖವಾಗಬೇಕಂತಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದು ಕೊಳ್ಳಬೇಕೆಂತಲೇ ನಾನು ಬಹಳ ಕಣ್ಣೀರಿನಿಂದಲೂ ಹೃದಯದ ಬಹುಸಂಕಟದಿಂದಲೂ ವ್ಯಾಕುಲ ದಿಂದಲೂ ನಿಮಗೆ ಬರೆದೆನು.

5ಆದರೆ ನಾನು ನಿಮ್ಮ ಮೇಲೆ ವಿಶೇಷವಾದ ಭಾರವನ್ನು ಹಾಕದಂತೆ ಯಾವನಾದರೂ ದುಃಖ ವನ್ನುಂಟು ಮಾಡಿದ್ದರೆ ಅವನು ಸ್ವಲ್ಪ ಮಟ್ಟಿಗೆ ನನ್ನನ್ನು ದುಃಖಪಡಿಸಿದ್ದಾನೆ.

6ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದವರಿಂದ ಉಂಟಾದ ಆ ಶಿಕ್ಷೆಯೇ ಸಾಕು.

7ಇನ್ನು ಮೇಲೆ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು.

೨ ಕೊರಿಂಥದವರಿಗೆ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी