ವಿಮೋಚನಕಾಂಡ 8:5

ಕರ್ತನು ಮೋಶೆಯ ಸಂಗಡ ಮಾತನಾಡಿ--ನೀನು ಆರೋನನಿಗೆ--ನೀನು ಕೋಲನ್ನು ಹಿಡು ಕೊಂಡು ಕಾಲುವೆಗಳ ಮೇಲೆಯೂ ನದಿಗಳ ಮೇಲೆಯೂ ಕೆರೆಗಳ ಮೇಲೆಯೂ ನಿನ್ನ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 8

3ನದಿಯು ಕಪ್ಪೆಗಳನ್ನು ಅಧಿಕವಾಗಿ ಬರಮಾಡು ವದು; ಅವು ಏರಿ ನಿನ್ನ ಮನೆಯಲ್ಲಿಯೂ ನೀನು ಮಲಗುವ ಕೋಣೆಯಲ್ಲಿಯೂ ಹಾಸಿಗೆಯ ಮೇಲೂ ಸೇವಕರ ಮನೆಗಳಲ್ಲಿಯೂ ಜನರ ಮೇಲೆಯೂ ಒಲೆಗ ಳಲ್ಲಿಯೂ ಹಿಟ್ಟು ನಾದುವ ಕೊಣವಿಗೆಗಳಲ್ಲಿಯೂ ಬರುವವು.

4ನಿನ್ನ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಎಲ್ಲಾ ಸೇವಕರ ಮೇಲೆಯೂ ಕಪ್ಪೆಗಳು ಏರಿ ಬರುವವು ಎಂದು ಹೇಳು ಅಂದನು.

5ಕರ್ತನು ಮೋಶೆಯ ಸಂಗಡ ಮಾತನಾಡಿ--ನೀನು ಆರೋನನಿಗೆ--ನೀನು ಕೋಲನ್ನು ಹಿಡು ಕೊಂಡು ಕಾಲುವೆಗಳ ಮೇಲೆಯೂ ನದಿಗಳ ಮೇಲೆಯೂ ಕೆರೆಗಳ ಮೇಲೆಯೂ ನಿನ್ನ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು.

6ಆರೋನನು ಐಗು ಪ್ತದ ನೀರುಗಳ ಮೇಲೆ ಕೈಚಾಚಿದಾಗ ಕಪ್ಪೆಗಳು ಏರಿಬಂದು ಐಗುಪ್ತದೇಶವನ್ನು ಮುಚ್ಚಿಕೊಂಡವು.

7ಆದರೆ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿ ಕಪ್ಪೆಗಳನ್ನು ಐಗುಪ್ತದೇಶದ ಮೇಲೆ ಬರಮಾಡಿದರು.

ವಿಮೋಚನಕಾಂಡ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी