೧ ಸಮುವೇಲನು 18:17

ಆಗ ಸೌಲನು--ನನ್ನ ಕೈ ಅವನ ಮೇಲೆ ಇರಬಾರದು; ಆದರೆ ಫಿಲಿಷ್ಟಿಯರ ಕೈ ಅವನ ಮೇಲೆ ಇರಲಿ ಅಂದುಕೊಂಡು ದಾವೀದನಿಗೆ--ಇಗೋ, ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು; ನೀನು ನನಗೋಸ್ಕರ ಪರಾಕ್ರಮಶಾಲಿ ಯಾಗಿದ್ದು ಕರ್ತನ ಯುದ್ಧಗಳನ್ನು ನಡಿಸು ಅಂದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 18

15ಕರ್ತನು ಅವನ ಸಂಗಡ ಇದ್ದನು. ಅವನು ಮಹಾಬುದ್ಧಿವಂತನಾಗಿ ನಡೆಯುವದನ್ನು ಸೌಲನು ನೋಡಿ ಅವನಿಗೆ ಭಯ ಪಟ್ಟಿದ್ದನು.

16ಇಸ್ರಾಯೇಲ್‌ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೋಗುತ್ತಾ ಬರುತ್ತಾ ಇರುವದರಿಂದ ಅವನನ್ನು ಪ್ರೀತಿ ಮಾಡಿದರು.

17ಆಗ ಸೌಲನು--ನನ್ನ ಕೈ ಅವನ ಮೇಲೆ ಇರಬಾರದು; ಆದರೆ ಫಿಲಿಷ್ಟಿಯರ ಕೈ ಅವನ ಮೇಲೆ ಇರಲಿ ಅಂದುಕೊಂಡು ದಾವೀದನಿಗೆ--ಇಗೋ, ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು; ನೀನು ನನಗೋಸ್ಕರ ಪರಾಕ್ರಮಶಾಲಿ ಯಾಗಿದ್ದು ಕರ್ತನ ಯುದ್ಧಗಳನ್ನು ನಡಿಸು ಅಂದನು.

18ದಾವೀದನು ಸೌಲನಿಗೆ--ಅರಸನಿಗೆ ಅಳಿಯನಾಗಿ ರುವದಕ್ಕೆ ನಾನೆಷ್ಟರವನು? ನನ್ನ ಜೀವನ ಏನು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರ ಅಂದನು.

19ಆದರೆ ಸೌಲನ ಮಗಳಾದ ಮೇರಬಳು ದಾವೀದನಿಗೆ ಕೊಡಲ್ಪಡುವದಕ್ಕಿರುವಾಗ ಅವಳು ಮೆಹೋಲದವನಾದ ಅದ್ರೀಯೇಲನಿಗೆ ಹೆಂಡತಿಯಾಗಿ ಕೊಡಲ್ಪಟ್ಟಳು.

೧ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी