ಧರ್ಮೋಪದೇಶಕಾಂಡ 1:43

ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ ಕರ್ತನ ಅಪ್ಪಣೆಗೆ ತಿರುಗಿಬಿದ್ದು ವ್ಯರ್ಥ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 1

41ನೀವು ಉತ್ತರ ಕೊಟ್ಟು ನನಗೆ--ಕರ್ತನಿಗೆ ಪಾಪ ಮಾಡಿದ್ದೇವೆ; ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ನಾವು ಹೋಗಿ ಯುದ್ಧ ಮಾಡುತ್ತೇವೆ ಅಂದಿರಿ. ನೀವೆಲ್ಲರು ನಿಮ್ಮ ಯುದ್ಧದ ಆಯುಧಗಳನ್ನು ತೆಗೆದುಕೊಂಡ ಮೇಲೆ ಬೆಟ್ಟಕ್ಕೆ ಹೋಗುವದು ಸಣ್ಣಕೆಲಸವೆಂದು ನೆನಸಿದಿರಿ.

42ಆದರೆ ಕರ್ತನು ನನಗೆ--ಹೋಗಬೇಡಿರಿ; ಯುದ್ಧಮಾಡ ಬೇಡಿರಿ; ಯಾಕಂದರೆ ನಾನು ನಿಮ್ಮ ಮಧ್ಯದಲ್ಲಿ ಇರುವದಿಲ್ಲ; ನೀವು ನಿಮ್ಮ ಶತ್ರುಗಳಿಂದ ಹೊಡೆಯ ಲ್ಪಡುವಿರಿ ಎಂದು ಅವರಿಗೆ ಹೇಳು ಅಂದನು.

43ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ ಕರ್ತನ ಅಪ್ಪಣೆಗೆ ತಿರುಗಿಬಿದ್ದು ವ್ಯರ್ಥ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.

44ಆಗ ಆ ಬೆಟ್ಟ ದಲ್ಲಿ ವಾಸಮಾಡುವ ಅಮೋರಿಯರು ನಿಮ್ಮೆದುರಿಗೆ ಹೊರಟು ಜೇನು ಹುಳಗಳು ಮುತ್ತಿಕೊಂಡಂತೆ ನಿಮ್ಮ ಬೆನ್ನುಹತ್ತಿ ಸೇಯಾರಿನಲ್ಲಿ ಹೊರ್ಮದ ಪರ್ಯಂತರ ನಿಮ್ಮನ್ನು ಸಂಹಾರಮಾಡಿದರು.

45ಆಗ ನೀವು ತಿರುಗಿಕೊಂಡು ಕರ್ತನ ಮುಂದೆ ಗೋಳಾಡಿದಿರಿ; ಆದರೆ ಕರ್ತನು ನಿಮ್ಮ ಧ್ವನಿಯನ್ನು ಕೇಳಲಿಲ್ಲ, ನಿಮಗೆ ಕಿವಿಗೊಡಲಿಲ್ಲ.

ಧರ್ಮೋಪದೇಶಕಾಂಡ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी