೧ ಅರಸುಗಳು 6:14

ಸೊಲೊಮೋನನು ಮನೆಯನ್ನು ಕಟ್ಟಿಸಿ ತೀರಿಸಿ ದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 6

12ನೀನು ಕಟ್ಟಿಸುವ ಈ ಮನೆಯನ್ನು ಕುರಿತು ಏನಂದರೆ--ನೀನು ನನ್ನ ಕಟ್ಟಳೆ ಗಳಲ್ಲಿ ನಡೆದು ನನ್ನ ನ್ಯಾಯಗಳ ಪ್ರಕಾರಮಾಡಿ ನನ್ನ ಸಕಲ ಆಜ್ಞೆಗಳಲ್ಲಿ ನಡೆದುಕೊಳ್ಳುವ ಹಾಗೆ ಅವುಗಳನ್ನು ಕೈಕೊಂಡರೆ ನಾನು ನಿನ್ನ ತಂದೆಯಾದ ದಾವೀದನಿಗೆ ಹೇಳಿದ ನನ್ನ ವಾಕ್ಯವನ್ನು ನಿನಗೆ ಸ್ಥಿರ ಮಾಡಿ,

13ನನ್ನ ಜನವಾದ ಇಸ್ರಾಯೇಲ್ಯರನ್ನು ಕೈಬಿಡದೆ ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ವಾಸ ವಾಗಿರುವೆನು ಅಂದನು.

14ಸೊಲೊಮೋನನು ಮನೆಯನ್ನು ಕಟ್ಟಿಸಿ ತೀರಿಸಿ ದನು.

15ಮನೆಯ ಗೋಡೆಗಳ ಒಳಭಾಗಕ್ಕೆ ಮಂದಿ ರದ ನೆಲ ಮೊದಲುಗೊಂಡು ಗೋಡೆಗಳ ಮೇಲೆ ಮಾಳಿಗೆಯ ವರೆಗೂ ದೇವದಾರು ಹಲಿಗೆಗಳಿಂದ ಕಟ್ಟಿಸಿದನು; ಒಳ ಭಾಗದಲ್ಲಿ ಮರದಿಂದ ಮುಚ್ಚಿ ಮನೆಯ ನೆಲಕ್ಕೆ ತುರಾಯಿ ಮರಗಳ ಹಲಿಗೆಗಳಿಂದ ಮುಚ್ಚಿದನು.

16ಅವನು ಮನೆಯ ಪಾರ್ಶ್ವಗಳಲ್ಲಿ ಇಪ್ಪತ್ತು ಮೊಳ ನೆಲವನ್ನೂ ಗೋಡೆಗಳನ್ನೂ ದೇವ ದಾರುಗಳ ಹಲಿಗೆಗಳಿಂದ ಕಟ್ಟಿಸಿದನು. ಅವುಗಳನ್ನು ಒಳ ಭಾಗದಲ್ಲಿ ಮಹಾ ಪರಿಶುದ್ಧವಾದ ದೈವೋಕ್ತಿಯ ಸ್ಥಾನವಾಗಿ ಕಟ್ಟಿಸಿದನು.

೧ ಅರಸುಗಳು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी