ಯಾಜಕಕಾಂಡ 14:15

ಯಾಜಕನು ಸೇರೆಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 14

13ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪಬಲಿಯನ್ನೂ ದಹನಬಲಿಯನ್ನೂ ವಧಿಸುವ ಸ್ಥಳದಲ್ಲಿ ವಧಿಸಬೇಕು; ಯಾಕಂದರೆ ಪಾಪಬಲಿಯಂತೆಯೇ ಅಪರಾಧ ಬಲಿಯೂ ಯಾಜಕನದಾಗಿದೆ, ಅದು ಅತಿ ಪರಿಶುದ್ಧವಾದದ್ದು.

14ಯಾಜಕನು ಅಪರಾಧ ಬಲಿ ಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಅದನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.

15ಯಾಜಕನು ಸೇರೆಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.

16ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ ಬೆರಳಿನಿಂದ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸ ಬೇಕು.

17ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಪಡಿಸಿಕೊಳ್ಳವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿಗೆ ಬಲಗಾಲಿನ ಹೆಬ್ಬೆರಳಿಗೆ ಹಚ್ಚ ಬೇಕು.

ಯಾಜಕಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी