ಅದೇ ದಿನದಲ್ಲಿ ಫರೋಹನು ಬಿಟ್ಟೀಕೆಲಸ ಮಾಡಿಸುವವರಿಗೂ ಅವರ ಅಧಿಕಾರಿ ಗಳಿಗೂ--
4ಐಗುಪ್ತದ ಅರಸನು ಅವರಿಗೆ--ಮೋಶೆಯೇ, ಆರೋನನೇ, ಜನರು ತಮ್ಮ ಕೆಲಸ ಗಳನ್ನು ಮಾಡದಂತೆ ಯಾಕೆ ಮಾಡುತ್ತೀರಿ? ನಿಮ್ಮ ಬಿಟ್ಟೀಕೆಲಸಗಳಿಗೆ ಹೋಗಿರಿ ಅಂದನು.
5ಫರೋ ಹನು--ಇಗೋ, ಈಗ ದೇಶದ ಜನರು ಹೆಚ್ಚಿದ್ದಾರೆ; ನೀವು ಅವರನ್ನು ಅವರ ಬಿಟ್ಟೀಕೆಲಸಗಳಿಂದ ನಿಲ್ಲಿಸಿ ಬಿಡುತ್ತೀರಿ ಅಂದನು.
6ಅದೇ ದಿನದಲ್ಲಿ ಫರೋಹನು ಬಿಟ್ಟೀಕೆಲಸ ಮಾಡಿಸುವವರಿಗೂ ಅವರ ಅಧಿಕಾರಿ ಗಳಿಗೂ--
7ನೀವು ಇನ್ನು ಇಟ್ಟಿಗೆಗಳನ್ನು ಮಾಡುವದಕ್ಕೆ ಮೊದಲಿನ ಹಾಗೆ ಜನರಿಗೆ ಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ.
8ಅವರು ಈ ವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ; ಆದದರಿಂದ ಅವರು--ನಾವು ಹೋಗಿ ನಮ್ಮ ದೇವರಿಗೆ ಬಲಿ ಅರ್ಪಿಸೋಣ ಎಂದು ಕೂಗುತ್ತಾರೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ