ಮತ್ತಾಯನು 13:34

ಯೇಸು ಇವೆಲ್ಲವುಗಳನ್ನು ಜನಸಮೂಹ ದೊಂದಿಗೆ ಸಾಮ್ಯಗಳಲ್ಲಿ ಮಾತನಾಡಿದನು; ಸಾಮ್ಯ ವಿಲ್ಲದೆ ಆತನು ಅವರೊಂದಿಗೆ ಮಾತನಾಡಲಿಲ್ಲ.

ಸಂದರ್ಭದೊಂದಿಗೆ ಓದಿ · ಮತ್ತಾಯನು 13

32ಅದು ಎಲ್ಲಾ ಬೀಜಗಳಿಗಿಂತಲೂ ಚಿಕ್ಕದಾದದ್ದೇ ನಿಜ; ಆದರೆ ಅದು ಬೆಳೆದಾಗ ಎಲ್ಲಾ ಸಸಿಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.

33ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ.

34ಯೇಸು ಇವೆಲ್ಲವುಗಳನ್ನು ಜನಸಮೂಹ ದೊಂದಿಗೆ ಸಾಮ್ಯಗಳಲ್ಲಿ ಮಾತನಾಡಿದನು; ಸಾಮ್ಯ ವಿಲ್ಲದೆ ಆತನು ಅವರೊಂದಿಗೆ ಮಾತನಾಡಲಿಲ್ಲ.

35ಹೀಗೆ--ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು; ಲೋಕದ ಅಸ್ತಿವಾರದಿಂದ ಮರೆಯಾಗಿ ಇಡಲ್ಪಟ್ಟವುಗಳನ್ನು ನಾನು ಹೊರಪಡಿಸುವೆನು ಎಂದು ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರಿತು.

36ತರುವಾಯ ಯೇಸು ಜನಸಮೂಹವನ್ನು ಕಳು ಹಿಸಿಬಿಟ್ಟು ಮನೆಯೊಳಕ್ಕೆ ಹೋದನು; ಆಗ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಹೊಲದ ಹಣಜಿಯ ಸಾಮ್ಯವನ್ನು ನಮಗೆ ವಿವರಿಸು ಅಂದರು.

ಮತ್ತಾಯನು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी