ರೋಮಾಪುರದವರಿಗೆ 15:15

ಆದಾಗ್ಯೂ ಸಹೋದರರೇ, ದೇವರು ನನಗೆ ಕೊಟ್ಟ ಕೃಪೆಯಿಂದ ಇವುಗಳನ್ನು ನಿಮ್ಮ ಜ್ಞಾಪಕಕ್ಕೆ ತರುವ ಹಾಗೆ ನಾನು ಒಂದು ವಿಧದಲ್ಲಿ ಹೆಚ್ಚು ಧೈರ್ಯದಿಂದ ನಿಮಗೆ ಬರೆದಿದ್ದೇನೆ;

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 15

13ನಿರೀಕ್ಷೆಗೆ ಆಧಾರನಾದ ದೇವರು ಪವಿತ್ರಾತ್ಮನ ಬಲದಿಂದ ನೀವು ನಿರೀಕ್ಷೆಯಲ್ಲಿ ಅಭಿವೃದ್ಧಿ ಹೊಂದು ವಂತೆ ನಂಬಿಕೆಯಿಂದುಂಟಾದ ಸಂತೋಷ ಸಮಾಧಾನಗಳಿಂದ ನಿಮ್ಮನ್ನು ತುಂಬಿಸಲಿ.

14ನನ್ನ ಸಹೋದರರೇ, ನೀವಂತೂ ಒಳ್ಳೇತನ ದಿಂದಲೂ ಸಕಲ ಜ್ಞಾನದಿಂದಲೂ ತುಂಬಿದವರಾಗಿ ಒಬ್ಬರಿಗೊಬ್ಬರು ಬುದ್ಧಿ ಹೇಳುವದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ವಿಷಯದಲ್ಲಿ ನನಗೂ ನಿಶ್ಚಯವುಂಟು.

15ಆದಾಗ್ಯೂ ಸಹೋದರರೇ, ದೇವರು ನನಗೆ ಕೊಟ್ಟ ಕೃಪೆಯಿಂದ ಇವುಗಳನ್ನು ನಿಮ್ಮ ಜ್ಞಾಪಕಕ್ಕೆ ತರುವ ಹಾಗೆ ನಾನು ಒಂದು ವಿಧದಲ್ಲಿ ಹೆಚ್ಚು ಧೈರ್ಯದಿಂದ ನಿಮಗೆ ಬರೆದಿದ್ದೇನೆ;

16ಹೀಗೆ ಅನ್ಯಜನಗಳೆಂಬ ಅರ್ಪಣೆಯು ಪವಿತ್ರಾತ್ಮನ ಮೂಲಕ ಶುದ್ಧೀಕರಿಸಲ್ಪಟ್ಟು ಆತನಿಂದ ಅಂಗೀಕಾರವಾಗುವಂತೆ ನಾನು ದೇವರ ಸುವಾರ್ತಾ ಸೇವೆಯನ್ನು ನಡಿಸುತ್ತಾ ಅನ್ಯಜನರಿಗೆ ಯೇಸು ಕ್ರಿಸ್ತನ ಸೇವಕನಾಗಿರುವೆನು.

17ಆದದರಿಂದ ದೇವರಿಗೆ ಸಂಬಂಧಪಟ್ಟವುಗಳಲ್ಲಿ ಯೇಸು ಕ್ರಿಸ್ತನ ಮೂಲಕ ನಾನು ಹೆಚ್ಚಳಪಡುತ್ತೇನೆ.

ರೋಮಾಪುರದವರಿಗೆ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी