ಅಪೊಸ್ತಲರ ಕೃತ್ಯಗಳು 19:34

ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 19

32ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ.

33ಅವರು ಅಲೆಕ್ಸಾಂದ್ರನನ್ನು ಸಮೂಹ ದೊಳಗಿಂದ ಹೊರಗೆ ತಂದಾಗ ಯೆಹೂದ್ಯರು ಅವನನ್ನು ಮುಂದೆ ತಂದರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಜನರಿಗೆ ಪ್ರತಿವಾದ ಮಾಡ ಬೇಕೆಂದಿದ್ದನು.

34ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.

35ಆಗ ಪುರಸಭೆಯ ಕಾರ್ಯದರ್ಶಿಯು ಜನರನ್ನು ಸಮಾಧಾನಪಡಿಸಿ ಹೇಳಿದ್ದೇನಂದರೆ--ಎಫೆಸದ ಜನರೇ, ಎಫೆಸದವರ ಈ ಪಟ್ಟಣವು ಮಹಾದೇವತೆಯಾದ ಡಯಾನಿಯನ್ನೂ ಬೃಹಸ್ಪತಿಯಿಂದ ಕೆಳಗೆ ಬಿದ್ದ ಪ್ರತಿಮೆಯನ್ನೂ ಹೇಗೆ ಆರಾದ್ಧಿಸುವದೆಂದು ತಿಳಿಯದ ಮನುಷ್ಯನು ಯಾವನು?

36ಈ ಸಂಗತಿ ಅಲ್ಲವೆನ್ನುವದಕ್ಕೆ ಯಾರಿಂದಲೂ ಆಗದಿರುವದರಿಂದ ನೀವು ಶಾಂತಿ ಯಿಂದಿರಬೇಕು; ದುಡುಕಿನಿಂದ ಏನೂ ಮಾಡಬಾರದು.

ಅಪೊಸ್ತಲರ ಕೃತ್ಯಗಳು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी