೧ ಅರಸುಗಳು 8:55

ಆಗ ಅವನು ಮಹಾ ಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಭೆಯನ್ನು ಆಶೀರ್ವದಿಸಿ--ತನ್ನ ಜನರಾದ ಇಸ್ರಾಯೇಲ್ಯರಿಗೆ ತಾನು ಮಾತು ಕೊಟ್ಟ ಎಲ್ಲಾದರ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಕರ್ತನು ಸ್ತುತಿಸ ಲ್ಪಡಲಿ.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

53ನೀನು ಐಗುಪ್ತದಿಂದ ನಮ್ಮ ಪಿತೃಗಳನ್ನು ಹೊರಡ ಮಾಡುವಾಗ ನಿನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಹೇಳಿದ ಹಾಗೆ ಅವರನ್ನು ನಿನ್ನ ಬಾಧ್ಯತೆಯಾಗಿ ಭೂಮಿಯ ಸಮಸ್ತ ಜನರೊಳಗಿಂದ ಪ್ರತ್ಯೇಕಿಸಿದಿ ಅಂದನು.

54ಆಕಾಶದ ಕಡೆಗೆ ಕೈಯೆತ್ತಿ ಕರ್ತನ ಯಜ್ಞವೇದಿಯ ಮುಂದೆ ಮೊಣಕಾಲೂರಿದ್ದ ಸೊಲೊಮೋ ನನು ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡಿ ಮುಗಿಸಿದ ನಂತರ ಎದ್ದು ನಿಂತನು.

55ಆಗ ಅವನು ಮಹಾ ಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಭೆಯನ್ನು ಆಶೀರ್ವದಿಸಿ--ತನ್ನ ಜನರಾದ ಇಸ್ರಾಯೇಲ್ಯರಿಗೆ ತಾನು ಮಾತು ಕೊಟ್ಟ ಎಲ್ಲಾದರ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಕರ್ತನು ಸ್ತುತಿಸ ಲ್ಪಡಲಿ.

56ಆತನು ತನ್ನ ಸೇವಕನಾದ ಮೋಶೆಯ ಮುಖಾಂತರ ಹೇಳಿದ ಎಲ್ಲಾ ಉತ್ತಮವಾದ ಮಾತು ಗಳಲ್ಲಿ ಒಂದು ಮಾತಾದರೂ ಬಿದ್ದು ಹೋದದ್ದಿಲ್ಲ.

57ಆತನು ನಮ್ಮ ತಂದೆಗಳಿಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನೂ ತನ್ನ ನ್ಯಾಯಗಳನ್ನೂ ಕೈಕೊಳ್ಳುವಂತೆಯೂ ತನ್ನ ಸಮಸ್ತ ಮಾರ್ಗಗಳಲ್ಲಿ ನಡೆಯುವಂತೆಯೂ ನಮ್ಮ ಹೃದಯಗಳನ್ನು ತನ್ನ ಕಡೆಗೆ ತಿರುಗಿಸುವ ಹಾಗೆ

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी