ಧರ್ಮೋಪದೇಶಕಾಂಡ 30:16

ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನ ಆಜ್ಞೆ, ನಿಯಮ, ನ್ಯಾಯಗಳನ್ನು ಕಾಪಾಡಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ; ಹಾಗೆ ಮಾಡಿದರೆ ನೀನು ಬದುಕಿ ಹೆಚ್ಚುವಿ; ನೀನು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 30

14ಈ ವಾಕ್ಯವು ನಿನಗೆ ಬಹಳ ಸವಿಾಪವಾಗಿದೆ; ಅದನ್ನು ಕೈಕೊಳ್ಳುವ ಹಾಗೆ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಅದೆ.

15ನೋಡು, ನಾನು ಈಹೊತ್ತು ಜೀವವನ್ನೂ ಮರಣವನ್ನೂ, ಒಳ್ಳೇದನ್ನೂ ಕೆಟ್ಟದ್ದನ್ನೂ ನಿನ್ನ ಮುಂದೆ ಇಟ್ಟಿದ್ದೇನೆ.

16ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನ ಆಜ್ಞೆ, ನಿಯಮ, ನ್ಯಾಯಗಳನ್ನು ಕಾಪಾಡಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ; ಹಾಗೆ ಮಾಡಿದರೆ ನೀನು ಬದುಕಿ ಹೆಚ್ಚುವಿ; ನೀನು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.

17ಆದರೆ ನಿನ್ನ ಹೃದಯವು ತಿರಿಗಿಬಿದ್ದು, ನೀನು ಕೇಳದೆಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆಯಲ್ಪಟ್ಟು ಅಡ್ಡಬಿದ್ದು ಅವುಗಳಿಗೆ ಸೇವೆಮಾಡಿದರೆ

18ಖಂಡಿತ ವಾಗಿಯೂ ನಶಿಸುವಿರೆಂದೂ ನೀವು ಸೇರಿ ಸ್ವಾಧೀನ ಮಾಡಿಕೊಳ್ಳುವದಕ್ಕೆ ಯೊರ್ದನನ್ನು ದಾಟಿಹೋಗುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವದಿಲ್ಲ ವೆಂದೂ ಈಹೊತ್ತು ನಿಮಗೆ ತಿಳಿಸುತ್ತೇನೆ.

ಧರ್ಮೋಪದೇಶಕಾಂಡ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी