೧ ಪೂರ್ವಕಾಲವೃತ್ತಾಂತ 19:6

ಅಮ್ಮೋನಿಯರು, ತಾವು ದಾವೀದನಿಗೆ ಅಸಹ್ಯರಾ ದೆವೆಂದು ಕಂಡಾಗ ಹಾನೂನನೂ ಅಮ್ಮೋನಿಯರೂ ಅರಾಮಿನಲ್ಲಿಯೂ ಅರಾಮ್‌ ಮಾಕದಲ್ಲಿಯೂ ಚೋಬಾದಲ್ಲಿಯೂ ರಥಗಳನ್ನೂ ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಸಾವಿರ ಬೆಳ್ಳಿ ತಲಾಂತುಗಳನ್ನು ಕಳುಹಿಸಿದರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 19

4ಆದದರಿಂದ ಹಾನೂ ನನು ದಾವೀದನ ಸೇವಕರನ್ನು ಹಿಡಿದು ಅವರನ್ನು ಬೋಳಿಸಿ ಅವರ ಅಂಗಿಗಳನ್ನು ಮಧ್ಯದಲ್ಲಿ ಸೊಂಟದ ಕೆಳಗಿನ ವರೆಗೂ ಕತ್ತರಿಸಿ ಅವರನ್ನು ಕಳುಹಿಸಿಬಿಟ್ಟನು.

5ಆಗ ಕೆಲವರು ಹೋಗಿ ಈ ಮನುಷ್ಯರನ್ನು ಕುರಿತು ದಾವೀದನಿಗೆ ತಿಳಿಸಿದರು. ಆ ಮನುಷ್ಯರು ಬಹಳವಾಗಿ ನಾಚಿಕೆಪಟ್ಟದ್ದರಿಂದ ಅವರನ್ನು ಎದುರುಗೊಳ್ಳಲು ಸೇವ ಕರನ್ನು ಕಳುಹಿಸಿ ಅರಸನು ಅವರಿಗೆ--ನಿಮ್ಮ ಗಡ್ಡಗಳು ಬೆಳೆಯುವ ವರೆಗೂ ಯೆರಿಕೋವಿನಲ್ಲಿ ಇರ್ರಿ; ಆಮೇಲೆ ತಿರಿಗಿ ಬನ್ನಿರಿ ಎಂದು ಹೇಳಿದನು.

6ಅಮ್ಮೋನಿಯರು, ತಾವು ದಾವೀದನಿಗೆ ಅಸಹ್ಯರಾ ದೆವೆಂದು ಕಂಡಾಗ ಹಾನೂನನೂ ಅಮ್ಮೋನಿಯರೂ ಅರಾಮಿನಲ್ಲಿಯೂ ಅರಾಮ್‌ ಮಾಕದಲ್ಲಿಯೂ ಚೋಬಾದಲ್ಲಿಯೂ ರಥಗಳನ್ನೂ ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಸಾವಿರ ಬೆಳ್ಳಿ ತಲಾಂತುಗಳನ್ನು ಕಳುಹಿಸಿದರು.

7ಹೀಗೆಯೇ ಅವರು ಮೂವತ್ತೆರಡು ಸಾವಿರ ರಥಗಳನ್ನೂ ಮಾಕದ ಅರಸನನ್ನೂ ಅವನ ಜನರನ್ನೂ ಕೂಲಿಗೆ ತೆಗೆದುಕೊಂಡರು. ಇವರು ಬಂದು ಮೇದೆಬ ಬಳಿಯಲ್ಲಿ ದಂಡಿಳಿದರು. ಇದಲ್ಲದೆ ಅಮ್ಮೋ ನಿಯರು ತಮ್ಮ ಪಟ್ಟಣಗಳಿಂದ ಕೂಡಿಕೊಂಡು ಯುದ್ಥಕ್ಕೆ ಬಂದರು.

8ದಾವೀದನು ಇದನ್ನು ಕೇಳಿದಾಗ ಅವನು ಯೋವಾ ಬನನ್ನೂ ಸಮಸ್ತ ಪರಾಕ್ರಮಶಾಲಿಗಳ ಸೈನ್ಯವನ್ನೂ ಕಳುಹಿಸಿದನು.

೧ ಪೂರ್ವಕಾಲವೃತ್ತಾಂತ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी