ಯೆಶಾಯ 50:6

ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.

ಸಂದರ್ಭದೊಂದಿಗೆ ಓದಿ · ಯೆಶಾಯ 50

4ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ. ಆತನು ಹೊತ್ತಾರೆಯಿಂದ ಹೊತ್ತಾರೆಗೆ ನನ್ನನ್ನು ಎಚ್ಚರಿಸಿ ಸುಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಜಾಗರೂಕಗೊಳಿಸುತ್ತಾನೆ.

5ಕರ್ತನಾದ ದೇವರು ನನ್ನ ಕಿವಿಯನ್ನು ತೆರೆದಿದ್ದಾನೆ. ನಾನು ಎದುರುಬೀಳಲಿಲ್ಲ ಇಲ್ಲವೆ ವಿಮುಖನಾಗಲೂ ಇಲ್ಲ.

6ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.

7ಕರ್ತನಾದ ದೇವರು ನನಗೆ ಸಹಾಯ ಮಾಡುವನು; ಆದಕಾರಣ ನಾನು ಆಶಾಭಂಗಪಡುವ ದಿಲ್ಲ; ಆದದರಿಂದ ನನ್ನ ಮುಖವನ್ನು ಬೆಣಚುಕಲ್ಲಿನಂತೆ ಮಾಡಿಕೊಂಡಿದ್ದೇನೆ; ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು.

8ನನಗೆ ನೀತಿ ನಿರ್ಣಯಿಸುವಾತನು ಸವಿಾಪದಲ್ಲಿಯೇ ಇದ್ದಾನೆ; ನನ್ನೊಂದಿಗೆ ಹೋರಾಡು ವವನು ಯಾರು? ನಾವು ಒಟ್ಟಿಗೆ ನಿಂತುಕೊಳ್ಳೋಣ, ನನ್ನ ಎದುರಾಳಿ ಯಾರು? ಅವನು ನನ್ನ ಸವಿಾಪಕ್ಕೆ ಬರಲಿ.

ಯೆಶಾಯ 50 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी