ಆದಿಕಾಂಡ 37:19

ಅವರು--ಇಗೋ, ಈ ಕನಸಿನವನು ಬರುತ್ತಿದ್ದಾನೆ;

ಸಂದರ್ಭದೊಂದಿಗೆ ಓದಿ · ಆದಿಕಾಂಡ 37

17ಆ ಮನುಷ್ಯನು--ಅವರು ಇಲ್ಲಿಂದ ಹೊರಟು ಹೋದರು. ಯಾಕಂದರೆ ಅವರು--ನಾವು ದೋತಾ ನಿಗೆ ಹೋಗೋಣ ಎಂದು ಹೇಳುತ್ತಿದ್ದದ್ದನ್ನು ನಾನು ಕೇಳಿಸಿಕೊಂಡೆನು ಅಂದನು. ಆಗ ಯೋಸೇಫನು ತನ್ನ ಸಹೋದರರನ್ನು ಹುಡಿಕಿಕೊಂಡು ಹೋಗಿ ದೋತಾನಿನಲ್ಲಿ ಅವರನ್ನು ಕಂಡುಕೊಂಡನು.

18ಅವರು ದೂರದಿಂದ ಅವನನ್ನು ನೋಡಿದಾಗ ಅವನು ಅವರ ಸವಿಾಪಕ್ಕೆ ಬರುವದಕ್ಕೆ ಮುಂಚೆಯೇ ಅವರು ಅವನನ್ನು ಕೊಂದುಹಾಕಬೇಕೆಂದು ಅವ ನಿಗೆ ವಿರೋಧವಾಗಿ ಒಳಸಂಚುಮಾಡಿಕೊಂಡರು.

19ಅವರು--ಇಗೋ, ಈ ಕನಸಿನವನು ಬರುತ್ತಿದ್ದಾನೆ;

20ಬನ್ನಿರಿ, ಈಗ ಅವನನ್ನು ಕೊಂದು--ಯಾವದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ; ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.

21ಆದರೆ ರೂಬೇನನು ಅದನ್ನು ಕೇಳಿ ಅವನನ್ನು ಅವರ ಕೈಗಳಿಂದ ತಪ್ಪಿಸಿ--ಅವನನ್ನು ಕೊಲ್ಲುವದು ಬೇಡ ಅಂದನು.

ಆದಿಕಾಂಡ 37 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी